ಮಹಾದಾಯಿ ವಿಚಾರವಾಗಿ ಗೋವಾ ಸಿಎಂಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು ಮಾತುಕತೆಗೆ ನೀವು ಹೇಳಿದಲ್ಲಿ ಬರಲು ಸಿದ್ದ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು (ಡಿ.22): ಮಹಾದಾಯಿ ವಿಚಾರವಾಗಿ ಗೋವಾ ಸಿಎಂಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು ಮಾತುಕತೆಗೆ ನೀವು ಹೇಳಿದಲ್ಲಿ ಬರಲು ಸಿದ್ದ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಗೋವಾ ಸಿಎಂ ಪರಿಕ್ಕರ್'ಗೆ ಜೊತೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್'ಗೂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. 3 ರಾಜ್ಯದ ಮುಖ್ಯಮಂತ್ರಿಗಳು ಮಾತುಕತೆ ಮೂಲಕ ಪರಿಹಾರಕ್ಕೆ ಯತ್ನಿಸುತ್ತಿದ್ದಾರೆ. ಮಾತುಕತೆ ಮೂಲಕ ವಿವಾದ ಪರಿಹರಿಸುವಂತೆ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಗೋವಾದಿಂದ ಅಧಿಕೃತ ಪತ್ರ ಬರದಿದ್ದರೂ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಶೀಘ್ರದಲ್ಲೇ ಸಭೆಯನ್ನು ನಿಗದಿ ಮಾಡಿ ಮಾಹಿತಿ ನೀಡಿ. ರಾಜ್ಯಕ್ಕೆ 14.98 ಟಿಎಂಸಿ ನೀರಿನ ಹಂಚಿಕೆಯಾಗಬೇಕಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ನಿಮ್ಮ ಸಂಪರ್ಕದಲ್ಲಿರುತ್ತಾರೆ. ಟ್ರಿಬ್ಯೂನಲ್ ಸಲಹೆಯಂತೆ ನಾವು ಮಾತುಕತೆಗೆ ಸಿದ್ದರಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
