ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳಿಗೆ ಚುನಾವಣೆ ಆಯೋಗ ಶಾಕ್ ನೀಡಿದ್ದು, ಕ್ರಿಮಿನಲ್ಗಳು ಇನ್ನು ರಾಜಕೀಯಲಕ್ಕೆ ಇಳಿಯುವಂತಿಲ್ಲ, ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನೀತಿ ಚುನಾವಣೆ ಆಯೋಗ ರೂಪಿಸಲು ಚಿಂತಿಸಿದೆ.
ನವದೆಹಲಿ (ನ.01): ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳಿಗೆ ಚುನಾವಣೆ ಆಯೋಗ ಶಾಕ್ ನೀಡಿದ್ದು, ಕ್ರಿಮಿನಲ್ಗಳು ಇನ್ನು ರಾಜಕೀಯಲಕ್ಕೆ ಇಳಿಯುವಂತಿಲ್ಲ, ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನೀತಿ ಚುನಾವಣೆ ಆಯೋಗ ರೂಪಿಸಲು ಚಿಂತಿಸಿದೆ.
ಅಪರಾಧ ಹಿನ್ನೆಲೆಯುಳ್ಳ ಕ್ರಿಮಿನಲ್ಗಳನ್ನು ಚುನಾವಣೆ ಸ್ಪರ್ಧೆಯಿಂದ ದೂರವಿಡಬೇಕು ಎಂದು ನಿರ್ಧರಿಸಿದೆ. ಈ ಕುರಿತು ಕೇಂದ್ರ ಸರಕಾರಕ್ಕೆ ಚುನಾವಣೆ ಆಯೋಗ ಮನವಿ ಸಲ್ಲಿಸಿದೆ. ಜೀವನ ಪೂರ್ತಿ ಚುನಾವಣೆಗೆ ಕ್ರಿಮಿನಲ್ಗಳು ಸ್ಪರ್ಧಿಸುವಂತಿಲ್ಲ. ಅಪರಾಧ ಹಿನ್ನೆಲೆಯುಳ್ಳ ಶಾಸಕರು ಮತ್ತು ಸಂಸದ ಸದಸ್ಯರನ್ನು ಜೀವನಪೂರ್ತಿ ಚುನಾವಣೆಗೆ ನಿಷೇಧಿಸುವಂತೆ ಇಸಿ ಸೂಚಿಸಿದೆ. ಶಾಶ್ವತವಾಗಿ ನಿಷೇಧ ಹೇರಲು ಇಸಿ ಚಿಂತನೆ. ಇದರಿಂದ ಲೋಕಸಭೆ, ವಿಧಾನಸಭೆ ಚುನಾವಣೆಗೆ ಅಂಗಿ ತೊಟ್ಟು ನಿಂತಿರುವ ಪುಂಡ ರಾಜಕಾರಣಿಗಳಿಗೆ ಇಸಿ ಬಿಸಿ ಮುಟ್ಟಿಸಿದೆ.
ಕೇವಲ ಅಪರಾಧಿಗಳಾಗಿರುವ ಜನಪ್ರತಿನಿಧಿಗಳನ್ನಷ್ಟೇ ಅಲ್ಲ, ಎಫ್ಐಆರ್ ಹಾಕಿಸಿಕೊಂಡಿರುವ ಜನಪ್ರತಿಗಳಿಗೂ ಚುನಾವಣೆಗೆ ನಿಲ್ಲಲು ಬಿಡಬಾರದು, ಆಗ ಯಡಿಯೂರಪ್ಪನಂತವರು ಚುನಾವಣೆಗೆ ನಿಲ್ಲಲಿಕ್ಕೇ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂಕೋರ್ಟ್ ಹೇಳಿರೋದು ಸರಿಯಾಗಿದೆ, ಕೇವಲ ಅಪರಾಧಿಗಳನ್ನಷ್ಟೇ ಅಲ್ಲ, ಎಫ್ಐಆರ್ ಎದುರಿಸುತ್ತಿರುವವರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು. ಆಗ ಯಡಿಯೂರಪ್ಪನಂತವರೂ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಲ್ಲ ಅಂತ ಸಿದ್ದರಾಮಯ್ಯ ಮಾತಿನ ಚಾಟಿ ಬೀಸಿದರು.
ಸುಪ್ರೀಂಕೋರ್ಟ್, ಕೇಂದ್ರ ಚುನಾವಣಾ ಆಯೋಗದ ನಿಲುವು ಸರಿ ಇದೆ. ಕ್ರಿಮಿನಲ್ ಜನಪ್ರತಿನಿಧಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಕ್ರಿಮಿನಲ್, ಗಂಭೀರ ಆರೋಪಗಳಿದ್ದವರಿಗೆ ಅವಕಾಶ ನೀಡಬಾರದು
ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ನಾನು ಸಚಿವನಾಗಿದ್ದಾಗಲೇ ಈ ಬಗ್ಗೆ ಮಸೂದೆ ರೂಪಿಸಿದ್ದೆ. ಆದರೆ ಎನ್ಡಿಎ ಸರ್ಕಾರ ಈ ಮಸೂದೆ ಅಂಗೀಕರಿಸಲು ಸಿದ್ಧವಿಲ್ಲ. ಮಸೂದೆ ಅಂಗೀಕರಿಸುವಂತೆ ಸಂಸತ್ನಲ್ಲಿ ಆಗ್ರಹಿಸುತ್ತೇನೆ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.
