ಬೆಂಗಳೂರು (ಸೆ.22): ಕಾವೇರಿಯನ್ನು ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಬಿಡುವಿಲ್ಲದೇ ಸಂಚಾರ ಮಾಡುತ್ತಿದ್ದಾರೆ.

ಕಾವೇರಿ ನೀರು ಬಿಡುಗಡೆ ಕಗ್ಗಂಟಿನ ಬಗ್ಗೆ ಚರ್ಚಿಸಲು ಸಿಎಂ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ರಾಜ್ಯಪಾಲರನ್ನು ಭೇಟಿ ಮಾಡಿ ವಿಶೇಷ ಅಧಿವೇಶನಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ರಾಜ್ಯಪಾಲ ವಾಜುಬಾಯಿ ವಾಲಾ ಸಮ್ಮತಿ ಸೂಚಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಮುಖಂಡ ಎಸ್. ಎಂ ಕೃಷ್ಣರಿಂದಲೂ ಸಲಹೆ ನೀಡಿದ್ದಾರೆ. ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಡಿ. ಕಾವೇರಿ ಜಲಾನಯನ ಪ್ರದೇಶಗಳಲ್ಲಿರುವ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ಹೂಳು ಎತ್ತಿಸಿ. ಬೆಳೆ ಬೆಳೆಯಲಾಗದೆ ಅಸಹಾಯಕರಾದ ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಕೃಷ್ಣಾರವರು ಹೇಳಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಬಿಜೆಪಿ ನಿನ್ನೆ ಸಭೆಗೆ ಹಾಜರಾಗದೇ ಇದ್ದುದು ಚರ್ಚಿತ ವಿಷಯವಾಗಿತ್ತು. ಇಂದು ದೇವೆಗೌಡರು ಯಡಿಯೂರಪ್ಪನವರಿಗೆ ಕರೆ ಮಾಡಿ ಕಾವೇರಿ ವಿಚಾರದಲ್ಲಿ ಐಕ್ಯತೆ ಮೆರೆಯಬೇಕು ಎಂದು ಹೇಳಿದ್ದಾರೆ. ಆ ಬಳಿಕ ಬಿಎಸ್ ವೈ ಸಿಎಂಗೆ ಕರೆ ಮಾಡಿ ಸರ್ಕಾರದ ನಿಲುವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.