ಕೃಷಿ ಭಾಗ್ಯ ಕಾರ್ಯಕ್ರಮವನ್ನು ದೇಶದ ಯಾವ ರಾಜ್ಯವೂ ಜಾರಿ ಮಾಡಿಲ್ಲ. ನಮ್ಮ ಸರ್ಕಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾ, ಕೆಲವರು ಏನೂ ಮಾಡದೆ ಮಣ್ಣಿನ ಮಗ ಅಂತಾ ಬಿರುದು ಹಾಕಿಕೊಳ್ಳುತ್ತಾರೆ. ಹಾಗಾದ್ರೆ ನಾನು ಕೃಷ್ಣಬೈರೇಗೌಡ ಯಾರು ? ಬಿಎಸ್ ಸಿ ಓದುವವರೆಗೆ ನಾನು ಸ್ವತಃ ಹೊಲ ಉತ್ತಿದ್ದೇನೆ ಎಂದು ಹೆಸರು ಹೇಳದೆ ದೇವೇಗೌಡ,ಯಡಿಯೂರಪ್ಪಗೆ ಸಿಎಂ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಸೆ.25): ಕೃಷಿ ಭಾಗ್ಯ ಕಾರ್ಯಕ್ರಮವನ್ನು ದೇಶದ ಯಾವ ರಾಜ್ಯವೂ ಜಾರಿ ಮಾಡಿಲ್ಲ. ನಮ್ಮ ಸರ್ಕಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾ, ಕೆಲವರು ಏನೂ ಮಾಡದೆ ಮಣ್ಣಿನ ಮಗ ಅಂತಾ ಬಿರುದು ಹಾಕಿಕೊಳ್ಳುತ್ತಾರೆ. ಹಾಗಾದ್ರೆ ನಾನು ಕೃಷ್ಣಬೈರೇಗೌಡ ಯಾರು ? ಬಿಎಸ್ ಸಿ ಓದುವವರೆಗೆ ನಾನು ಸ್ವತಃ ಹೊಲ ಉತ್ತಿದ್ದೇನೆ ಎಂದು ಹೆಸರು ಹೇಳದೆ ದೇವೇಗೌಡ,ಯಡಿಯೂರಪ್ಪಗೆ ಸಿಎಂ ಟಾಂಗ್ ನೀಡಿದ್ದಾರೆ.
ನಮ್ಮ ಸರ್ಕಾರ ರೈತರ ಪರ ಕೆಲಸ ಮಾಡಿದೆ. ರೈತರಿಗಾಗಿ ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಆದರೆ ಕೆಲವರು ಕೆಲಸ ಮಾಡದೇ ಮಣ್ಣಿನ ಮಗ, ಮಣ್ಣಿನ ಮಗ, ರೈತರ ಮಗ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಉಳುಮೆ ಮಾಡಿದ್ದೇನೆ. ನಾನು ರೈತರ ಮಗ. ಅವ್ರು ಮಾತ್ರ ಮಣ್ಣಿನ ಮಗ ಆದರೆ ನಾವು ಏನು? ಸುಮ್ಮನೆ ಮಣ್ಣಿನ ಮಗ,ರೈತರ ಮಗ ಅಂತ ಅವರೇ ಬಿರುದು ಕೊಟ್ಟುಕೊಂಡಿದ್ದಾರೆ ಎಂದು ಹೆಸರನ್ನು ಹೇಳದೆ ದೇವೇಗೌಡರು,ಯಡಿಯೂರಪ್ಪ ವಿರುದ್ದ ಸಿಎಂ ವಾಗ್ದಾಳಿ ನಡೆಸಿದ್ದಾರೆ.
