ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ನಿಮ್ಮ ಕನಸು ಈಡೇರಲು ನಾವು ಬಿಡಲ್ಲ: ಬಿಜೆಪಿಗೆ ಸಿಎಂ ಚಾಟಿ

CM Siddharamaiah Slams BJP
Highlights

ಧರ್ಮ ಧರ್ಮಗಳ ಬೆಂಕಿ ಹಚ್ಚುತ್ತಿದ್ದೀರಿ.  ನಿಮ್ಮ ಕನಸು ಈಡೇರಲು ಬಿಡಲ್ಲ. ಸರ್ಕಾರದ ಬಗ್ಗೆ ಜನರಿಗೆ ಒಲವು ಇದೆ. ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆ.  ಸೋನಿಯಾ ಗಾಂಧಿ ಸ್ಪರ್ಧಿಸಿದ ನಾಡು. ಭಾವನಾತ್ಮಕ ಸಂಬಂಧ ಇದೆ. ನಮ್ಮ ಶಕ್ತಿಗೆ ಈ ಬಾರಿ ಆನಂದ್ ಸಿಂಗ್ , ಭೀಮಾನಾಯ್ಕ, ನಾಗೇಂದ್ರ ಬೆಂಬಲವಿದೆ ಎಂದು ಸಿಎಂ ಸಿದ್ದರಾಮಯ್ಯ  ಹೇಳಿದ್ದಾರೆ. 

ಬೆಂಗಳೂರು (ಫೆ.10): ಧರ್ಮ ಧರ್ಮಗಳ ಬೆಂಕಿ ಹಚ್ಚುತ್ತಿದ್ದೀರಿ.  ನಿಮ್ಮ ಕನಸು ಈಡೇರಲು ಬಿಡಲ್ಲ. ಸರ್ಕಾರದ ಬಗ್ಗೆ ಜನರಿಗೆ ಒಲವು ಇದೆ. ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆ.  ಸೋನಿಯಾ ಗಾಂಧಿ ಸ್ಪರ್ಧಿಸಿದ ನಾಡು. ಭಾವನಾತ್ಮಕ ಸಂಬಂಧ ಇದೆ. ನಮ್ಮ ಶಕ್ತಿಗೆ ಈ ಬಾರಿ ಆನಂದ್ ಸಿಂಗ್ , ಭೀಮಾನಾಯ್ಕ, ನಾಗೇಂದ್ರ ಬೆಂಬಲವಿದೆ ಎಂದು ಸಿಎಂ ಸಿದ್ದರಾಮಯ್ಯ  ಹೇಳಿದ್ದಾರೆ. 

ರಾಹುಲ್ ಗಾಂಧಿ ನಾಯಕತ್ವದಲ್ಲಿ ಬಳ್ಳಾರಿಯ 9 ಕ್ಷೇತ್ರದಲ್ಲಿ ಗೆಲ್ಲುತ್ತೇವೆ.  ಬಿಜೆಪಿ ಗೆಲ್ಲಲ್ಲ. ಜೆಡಿಎಸ್ ಇಲ್ವೇ ಇಲ್ಲ.  ಡೋಂಗಿ ಪಕ್ಷಕ್ಕೆ ಮತ ನೀಡಬೇಡಿ.  ಮನುಷತ್ವ ಇಲ್ಲದಿರುವ ಪಕ್ಷ ಬಿಜೆಪಿ.  ಚುನಾವಣೆಗಾಗಿ ಡೋಂಗಿ ಮಾತನಾಡುತ್ತಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಪದವೇ ಸುಳ್ಳು. ಅನಂತ ಕುಮಾರ್  ಹೆಗಡೆ ನಾಲಾಯಕ್ ಮಂತ್ರಿ.  ಗ್ರಾಮ ಪಂಚಾಯ ಸದಸ್ಯರಾಗಲು ನಾಲಾಯಕ್.  ಸಂವಿಧಾನ ಬದಲು ಮಾಡಲು ಹೊರಟ ನಾಯಕರಿವರು. ಇದೆಲ್ಲವೂ ಮೋದಿ ಷಾ ಗೆ ಗೊತ್ತಿದ್ದೇ ಮಾತನಾಡಿದ್ದಾರೆ.  ಮುಸ್ಲಿಂ ಕ್ರಿಶ್ಚಿಯನ್ ಯಾರು ಬೇಡ ಎನ್ನುವ ಪಕ್ಷ ನಿಮ್ಮದು ಎಂದು ವಾಗ್ದಾಳಿ ನಡೆಸಿದ್ದಾರೆ. 

ನೂರಕ್ಕೆ ನೂರು ಗೆಲ್ಲುತ್ತೇವೆ. ರಾಹುಲ್ ಗಾಂಧಿ ಅವರನ್ನು ಗೆಲ್ಲಿಸೋಣ. ಈ ಚುನಾವಣೆ 2019 ರ ಲೋಕಸಭೆ ಚುನಾವಣೆಗೆ  ನಾಂದಿಯಾಗುತ್ತದೆ. ರಾಹುಲ್ ಗಾಂಧಿ ಪ್ರಧಾನಿಯಾಗಲು‌ ಪಣ ತೋಡಬೇಕಿದೆ.  ರಾಹುಲ್ ಪ್ರಧಾನಿ ಆಗುವುದು ನಿಶ್ಚಿತ.  ಹೈಕ ಜನ ರಾಹುಲ್ ಅವರನ್ನು ಬೆಂಬಲಿಸಬೇಕು. ಮತ್ತೆ ನಿಮ್ಮೂರಿಗೆ ಬಂದು ಮೋದಿ ಅಮಿತ್ ಷಾ ಡೋಂಗಿ ರಾಜಕಾರಣದ ಬಗ್ಗೆ ಹೇಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. 

ಮಹಾದಾಯಿ ವಿಚಾರ ಪ್ರಸ್ತಾಪಿಸುತ್ತಾ,  ನಿರಂತರ ಹೋರಾಟ ಮಾಡಿದ್ರು ಬಿಜೆಪಿ ನಾಯಕರು ಮಾತನಾಡಲ್ಲ. ಪ್ರಧಾನಿಗೆ ಮಧ್ಯಸ್ಥಿಕೆ ವಹಿಸಲು ಆಗ್ರಹ ಮಾಡಬೇಕು.  ಈ ಹಿಂದೆ ಇಂದಿರಾ ಗಾಂಧಿ ಮಾತುಕತೆ ಮೂಲಕ ತಮಿಳು ನಾಡಿಗೆ ನೀರು ಕೊಡಿಸಿದರು.  ಅದೇ ರೀತಿ ಈಗ ನೀವು ಮಾಡಿ.  ರೈತರ ಸಾಲ ಮನ್ನಾ ಮಾಡಿದ್ದೇವೆ. ಕೈ ಜೋಡಿಸಿ ಬೇಡಿಕೊಂಡ್ರು ಮೋದಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲಿಲ್ಲ.  ಚುನಾವಣೆ ಹಿನ್ನಲೆ ಈಗ ರೈತರ ಬಗ್ಗೆ ಬಜೆಟ್ ನಲ್ಲಿ ಮಾತನಾಡಲು ಮೋದಿ ಆರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

 

 

loader