ಸಿಎಂ ಸಿದ್ದರಾಮಯ್ಯ ಅವರಿಗೆ ಸಹೋದರಿ ವಿಯೋಗವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು  ಸಿಎಂ ಸಹೋದರಿ ಚಿಕ್ಕಮ್ಮ ನಿಧನರಾಗಿದ್ದಾರೆ. 

ಬೆಂಗಳೂರು (ಅ.07): ಸಿಎಂ ಸಿದ್ದರಾಮಯ್ಯ ಅವರಿಗೆ ಸಹೋದರಿ ವಿಯೋಗವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಿಎಂ ಸಹೋದರಿ ಚಿಕ್ಕಮ್ಮ ನಿಧನರಾಗಿದ್ದಾರೆ. 

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಇಂದಿನ ಅಧಿಕೃತ ಕಾರ್ಯಕ್ರಮಗಳು ರದ್ದುಗೊಂಡಿದ್ದವು. ತಮ್ಮೆಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಸಿಎಂ, ಪುತ್ರ ಯತೀಂದ್ರರ ಜೊತೆ ಮೈಸೂರಿಗೆ ತೆರಳಿದರು. ಮೈಸೂರಿನ ಸಿದ್ದರಾಮನಹುಂಡಿ ಸಮೀಪ ದೇವೇಗೌಡನಹುಂಡಿಯಲ್ಲಿ ಚಿಕ್ಕಮ್ಮನ ಅಂತ್ಯಕ್ರಿಯೆ ನೆರವೇರಿತು. ಹಾಲು ಮತದ ಸಂಪ್ರದಾಯದಂತೆ ಸಿಎಂ ಸಹೋದರಿಯ ಅಂತ್ಯಕ್ರಿಯೆ ನೆರವೇರಿಸಿದರು. .ಸೋದರಿ ಕಳೆದುಕೊಂಡ ಸಿಎಂ ಭಾವುಕರಾದರು. ಇನ್ನೂ ಅಂತ್ಯಕ್ರಿಯೆಯಲ್ಲಿ ಹಲವು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯ ಕರ್ತರು ಕೂಡ ಭಾಗವಹಿಸಿದ್ದರು. ಅಲ್ಲದೇ ಇತ್ತೀಚೆಗೆ ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿರುವ ವಿಜಯಶಂಕರ್ ಕೂಡ ಗ್ರಾಮಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.