ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ. ಏಕೀಕರಣ ಆದ ಮೇಲೂ ಹಿಂದುಳಿದ ತಾಲೂಕುಗಳಿಗೆ ಒತ್ತು ಕೊಟ್ಟು ಕೆಲಸ ಮಾಡಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  

ಧಾರವಾಡ (ಡಿ. 24): ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ. ಏಕೀಕರಣ ಆದ ಮೇಲೂ ಹಿಂದುಳಿದ ತಾಲೂಕುಗಳಿಗೆ ಒತ್ತು ಕೊಟ್ಟು ಕೆಲಸ ಮಾಡಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಂಜುಡಪ್ಪನವರ ವರದಿಯಂತೆ ಪ್ರತಿವರ್ಷ 3000 ಕೋಟಿ ಖರ್ಚು ಮಾಡಬೇಕು ಅಂದುಕೊಂಡಿದ್ದೇನೆ. ಹೆಚ್ಚು ಹಿಂದುಳಿದ ತಾಲೂಕುಗಳು ಹೈದರಾಬಾದ್ ಕರ್ನಾಟಕದಲ್ಲಿವೆ. ಮೈಸೂರು ರಾಜರು ಪ್ರಗತಿಪರರಾಗಿದ್ದರಿಂದ ಮೈಸೂರು ತಕ್ಕ ಮಟ್ಟಿಗೆ ಅಭಿವೃದ್ದಿಯಾಗಿತ್ತು. ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸಬೇಕಾದರೆ ಒಂದು ಲಕ್ಷ ಕೋಟಿ ರೂಪಾಯಿ ಬೇಕು ಮಾತು ಕೊಟ್ಟ ರೀತಿಯಲ್ಲಿ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಳಸಾ ಬಂಡೂರಿಮಹದಾಯಿ ವಿವಾದ ಬಗ್ಗೆ ಪ್ರತಿಕ್ರಿಯೆ

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಯಾವುದೇ ಕಾನೂನು ತೊಡಕಿಲ್ಲ. ಅವರು ಮನಸ್ಸು ಮಾಡಬೇಕಷ್ಟೇ ನಾನೂ ಲಾಯರ್ ಆಗಿ ಹೇಳ್ತಿದೇನೆ. ಕಾವೇರಿ ಇರಲಿ, ಕಳಸಾ ಇರಲಿ ರಾಜಕೀಯ ಮಾಡಬಾರದು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಷಯ ಕೋರಿದ್ದಾರೆ.