ಸಿಎಂ. ಸಿದ್ಧರಾಮಯ್ಯ ಮೈಸೂರಿನಲ್ಲಿ ಇಂದು ಸೈಕಲ್ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು.  ದೇಶದ ಮೊಟ್ಟಮೊದಲ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ‘ಟ್ರಿಣ್ ಟ್ರಿಣ್’ಗೆ  ಸ್ವತಃ ತಾವೇ ಸೈಕಲ್ ತುಳಿಯುವ ಮೂಲಕ ಸಿಎಂ.ಸಿದ್ಧರಾಮಯ್ಯ ಚಾಲನೆ ನೀಡಿದರು. 

ಮೈಸೂರು (ಜೂ.04): ಸಿಎಂ. ಸಿದ್ಧರಾಮಯ್ಯ ಮೈಸೂರಿನಲ್ಲಿ ಇಂದು ಸೈಕಲ್ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು. ದೇಶದ ಮೊಟ್ಟಮೊದಲ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ‘ಟ್ರಿಣ್ ಟ್ರಿಣ್’ಗೆ ಸ್ವತಃ ತಾವೇ ಸೈಕಲ್ ತುಳಿಯುವ ಮೂಲಕ ಸಿಎಂ.ಸಿದ್ಧರಾಮಯ್ಯ ಚಾಲನೆ ನೀಡಿದರು. 

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೈಕಲ್ ಸವಾರಿ ವಿಶೇಷವಾಗಿತ್ತು. ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಮೈಸೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಸೈಕಲ್ ವ್ಯವಸ್ಥೆ ಜಾರಿಗೆ ಬರುತ್ತಿದ್ದು ನಾಗರಿಕರಿಗೆ ಖುಷಿ ತಂದಿದೆ.