ಬೆಂಗಳೂರು (ಫೆ.09): ರೈತರಿಗೆ 52 ಸಾವಿರ ಕೋಟಿ ಸಾಲ ಕೊಟ್ಟಿದ್ದೇವೆ. 42 ಸಾವಿರ ಕೋಟಿ ನ್ಯಾಷನಲ್ ಬ್ಯಾಂಕ್ ಸಾಲ ಕೊಟ್ಟಿದೆ. ಸಹಕಾರ ಬ್ಯಾಂಕ್ ಗಳಿಂದ ನಾವು 10 ಸಾವಿರ ಕೋಟಿ ಸಾಲ ನೀಡಿದ್ದೇವೆ. ಹೀಗಾಗಿ ನೀವು ಅರ್ಧ ಸಾಲ ಮನ್ನಾ ಮಾಡಿ ನಾವು ಅರ್ಧ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಧಾನಿಗಳಿಗೆ ಹೇಳಿದ್ದೆ ಆದರೆ ಈವರೆಗೂ ಅದು ಆಗಿಲ್ಲ ಎಂದು ವಿಧಾನಪರಿಷತ್ ನಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಹಿಂದೆ ಮನಮೋಹನ್ ಸಿಂಗ್ ಇದ್ದಾಗ ದೇಶದ ರೈತರ 72 ಸಾವಿರ ಕೋಟಿ‌ ರೂ. ಸಾಲ ಮನ್ನಾ ಮಾಡಿದ್ರು. ಕೇಂದ್ರ ಶೇ.80 ರಷ್ಟು ಸಾಲ , ರಾಜ್ಯ ಶೇ.20 ರಷ್ಟು ಸಾಲ ನೀಡಿದೆ. ಈಗ ರಾಜ್ಯ ಸರ್ಕಾರದ ಬಳಿ‌ ಬಂದು ಸಾಲ ‌ಮನ್ನಾ ಮಾಡಿ ಅಂತಿದ್ದಾರೆ. ಬಿಜೆಪಿಯವರೆ ನೀವು ಕೇಂದ್ರ ಸರ್ಕಾರಕ್ಕೆ ಹೇಳಿ ಎಂದ ಸಿ.ಎಂ ಹೇಳಿದ್ದಾರೆ.

ಬಿಎಸ್ ವೈ ಮೊದಲು ‌ ಸಾಲ ಮನ್ನಾ ಮಾಡಿದ್ದಾಗಲೂ ಕೇವಲ ಶೇ.20 ರಷ್ಟು ರೈತರಿಗೆ ಮಾತ್ರ ಸಹಾಯವಾಗಿತ್ತು. ನಾವು ಶೇ. 100 ರಷ್ಟು ರೈತರಿಗೂ ಸಾಲ ಮನ್ನಾ ಆಗಲಿ ಎನ್ನುವ ಉದ್ದೇಶ ನಮ್ಮದು .ಹೀಗಾಗಿ ಕೇಂದ್ರವೂ ಸಾಲ ಮನ್ನಾ ಮಾಡುವ ಉದಾರತೆ ತೋರಲಿ ಎಂದ ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.

78 ಲಕ್ಷ ರೈತರಲ್ಲಿ ಈಗ ನಾವು 23 ಲಕ್ಷ ರೈತರಿಗೆ ಸಾಲ ನೀಡಿದ್ದೇವೆ. ಆದರೆ 78 ಲಕ್ಷ ರೈತರಿಗೂ ಸಾಲ ನೀಡಬೇಕೆನ್ನುವ ಉದ್ದೇಶ ನಮ್ಮ‌ ಸರ್ಕಾರಕ್ಕಿದೆ . ಪ್ರತಿವರ್ಷ ಶೇ. 10 ರಷ್ಟು ರೈತರಿಗೆ ಸಾಲ ಹೆಚ್ಚಿಸಲಾಗುತ್ತಿದೆ ಎಂದು ಸದನದಲ್ಲಿ ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.