ಹನುಮ ಜಯಂತಿ ಗಲಾಟೆ ವೇಳೇ ಬ್ಯಾರಿಕೇಡ್ ಮೇಲೆ ವಾಹನ ಚಲಾಯಿಸಿದ ಪ್ರತಾಪ್ ಸಿಂಹ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಡಿ.03): ಹನುಮ ಜಯಂತಿ ಗಲಾಟೆ ವೇಳೇ ಬ್ಯಾರಿಕೇಡ್ ಮೇಲೆ ವಾಹನ ಚಲಾಯಿಸಿದ ಪ್ರತಾಪ್ ಸಿಂಹ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ತಾವೇ ವಾಹನ ಓಡಿಸಿ ಬ್ಯಾರಿಕೇಡ್ ಮೇಲೆ ವಾಹನ ಚಲಾಯಿಸಿದ್ದು ಎಷ್ಟು ಸರಿ? ಸಂಸದರಾಗಿ ಹೀಗೆ ಮಾಡಿದ್ದು ಸರಿನಾ ? ವಾಟ್ ಅಬೌಟ್ ಲಾ ? ಇವರೇ ಹೀಗೆ ಮಾಡಿದರೆ ಜನರು ಇವರನ್ನ ಫಾಲೋ ಮಾಡಿದ್ರೆ ಹೇಗೆ ? ಸಾಮರಸ್ಯ ಕಾಪಾಡಬೇಕಾದವರೇ ಹೀಗೆ ಮಾಡಿದರೆ ಹೇಗೆ? ಎಂದು ಸಿಎಂ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇವರೊಬ್ಬರೇನಾ ಹನುಮ ಜಯಂತಿ ಮಾಡೋದು, ರಾಮನವಮಿ ಮಾಡೋದು ? ನಾವು ಮಾಡಲ್ವಾ ? ಚುನಾವಣೆ ಬಂತು ಅನ್ನೋ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದವರು. ಪ್ರತಾಪ್ ಸಿಂಹ ವಾಹನ ಓಡಿಸಿ ಬ್ಯಾರಿಕೇಡ್ ಹತ್ತಿಸಿದ್ದನ್ನ ಯಡಿಯೂರಪ್ಪ ಒಪ್ಪಿಕೊಳ್ತಾರಾ ಎಂದು ಬಿಎಸ್'ವೈ ಗೂ ಟಾಂಗ್ ನೀಡಿದ್ದಾರೆ.
