Asianet Suvarna News Asianet Suvarna News

ಮಠ ಸ್ಥಾಪಿಸಿದವನೇ ನಾನು; ನಾನು ಸ್ವಾಧೀನಪಡಿಸಿಕೊಳ್ಳುತ್ತೀನಾ?

ಮಠಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ ಹೊರಡಿಸಿ ದ ಮುಜರಾಯಿ ಸಚಿವರ ವಿರುದ್ಧ ಸ್ವತಃ ಮುಖ್ಯಮಂತ್ರಿಯವರೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ  ದಾವಣಗೆರೆಯಲ್ಲಿ ನಡೆದಿದೆ.

CM Siddharamaiah Defend himself

ಬೆಂಗಳೂರು (ಫೆ.10): ಮಠಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ ಹೊರಡಿಸಿ ದ ಮುಜರಾಯಿ ಸಚಿವರ ವಿರುದ್ಧ ಸ್ವತಃ ಮುಖ್ಯಮಂತ್ರಿಯವರೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ  ದಾವಣಗೆರೆಯಲ್ಲಿ ನಡೆದಿದೆ.

ನಾವೇ ಮಠಗಳನ್ನು ಸ್ಥಾಪಿಸಿದವರು. ಅಂಥದರಲ್ಲಿ ಮಠ,  ದೇವಸ್ಥಾನಗಳನ್ನು ನಾವ್ಯಾಕೆ ಸ್ವಾಧೀನಪಡಿಸಿಕೊಳ್ಳೋಣ? ನನ್ನ ವಿರುದ್ಧ ಬಿಜೆಪಿಯವರು ವ್ಯವಸ್ಥಿತ ಅಪಪ್ರಚಾರ ನಡೆಸಿದ್ದಾರೆ. ಮುಜ ರಾಯಿ ಸಚಿವರ ಕೆಲಸದಿಂದ ಸರ್ಕಾರ ಮುಜುಗರಕ್ಕೀಡಾಗುವಂತಾಗಿದೆ ಎಂದರು.  ಈ ವೇಳೆ ಎದ್ದು ನಿಂತ ಮುಜರಾಯಿ ಸಚಿವರು ರುದ್ರಪ್ಪ ಲಮಾಣಿಗೆ ‘ಕೂತ್ಕೋ... ಕೂತ್ಕೋ...’ ಎಂದು ಸಿದ್ದರಾಮಯ್ಯ ಅವರು ಕೈ ಸಂಜ್ಞೆ ಮಾಡಿದರು.

ಬಿಜೆಪಿ-ಜೆಡಿಎಸ್  ದೋಸ್ತಿ ಸರ್ಕಾರದಲ್ಲಿ ಮುಜರಾಯಿ ಸಚಿವರೂ ಆಗಿದ್ದ ಡಾ.ವಿ.ಎಸ್ ಆಚಾರ್ಯ ಇದೇ ರೀತಿಯ ಪ್ರಕಟಣೆ ಹೊರಡಿಸಿದರು. ಅದೇ ಪ್ರಕಟಣೆಯನ್ನು ಈಗ ಮುಜರಾಯಿ ಸಚಿವ ರು ದ್ರಪ೩ ಲಮಾಣಿ ಹೊರಡಿಸಿ, ಸಾರ್ವಜನಿಕರ ಅಭಿಪ್ರಾಯ ಕೇಳಿ ಮುಜುಗರ ತಂದಿಟ್ಟಿದ್ದಾರೆ.  ದಿವಂಗತ ಎಸ್. ನಿಜಲಿಂಗಪ್ಪ, ದೇವರಾಜ ಅರಸು ನಂತರ 5 ವರ್ಷದ ಅವಧಿ ಪೂರೈಸುತ್ತಿರುವ ಏಕೈಕ ಮುಖ್ಯಮಂತ್ರಿ ನಾನೇ. ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿಯವರು ತಮ್ಮ  ವಿರುದ್ಧ ಮಿಥ್ಯಾರೋಪ, ಅಪಪ್ರಚಾರ ನಡೆಸಿದ್ದಾರೆ.  ಮಠ ಸ್ಥಾಪಿಸಿ ವನೇ ನಾನು. ನಾನು ಮಠಗಳನ್ನು, ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳುತ್ತೀನಾ ಎಂದು ಜನರಿಗೆ ಪ್ರಶ್ನಿಸಿದರು.