ನಾನು ಉತ್ತರ ಪ್ರದೇಶ ಸಿಎಂ ಯೋಗಿಗಿಂತ ಒಳ್ಳೆ ಹಿಂದೂ. ಸಿಎಂ ಆದಿತ್ಯನಾಥ್ ಗೆ ಮನಷ್ಯತ್ವ ಇಲ್ಲ. ಆದಿತ್ಯನಾಥ್ ರಾಕ್ಷಸಿ ಪ್ರವೃತ್ತಿ ವ್ಯಕ್ತಿತ್ವದವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಜ.08): ನಾನು ಉತ್ತರ ಪ್ರದೇಶ ಸಿಎಂ ಯೋಗಿಗಿಂತ ಒಳ್ಳೆ ಹಿಂದೂ. ಸಿಎಂ ಆದಿತ್ಯನಾಥ್ ಗೆ ಮನಷ್ಯತ್ವ ಇಲ್ಲ. ಆದಿತ್ಯನಾಥ್ ರಾಕ್ಷಸಿ ಪ್ರವೃತ್ತಿ ವ್ಯಕ್ತಿತ್ವದವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಯೋಗಿ ಆದಿತ್ಯನಾಥ್ ವಿವೇಕಾನಂದರನ್ನು ಓದಿಕೊಳ್ಳಲಿ. ಬೂಟಾಟಿಕೆಗೆ ಯೋಗಿ ಖಾವಿ ಹಾಕೊಂಡಿದ್ದಾರೆ. ಯೋಗಿಗೆ ಹಿಂದುತ್ವ ಹೇಳುವ ಯೋಗ್ಯತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಯೋಗಿ ಹಸು ಎಮ್ಮೆ ಸಾಕಿದ್ದಾನಾ? ಹಸುವಿನ ಸಗಣಿ ಎತ್ತಿ, ಗೊಬ್ಬರ ಹೊತ್ತಿದ್ದಾನಾ? ಹಸು ಸಾಕದವರತ್ರ ಗೋವು ಬಗ್ಗೆ ಪಾಠ ಮಾಡುತ್ತಾನೆ. ನಾನು ಸಗಣಿ ಎತ್ತಿದ್ದೇನೆ, ಗೊಬ್ಬರ ಹೊತ್ತವನು. ಯೋಗಿ ಒಬ್ಬ ಡೋಂಗಿ ವ್ಯಕ್ತಿ. ನನಗೆ ಬೀಫ್ ಹಿಡಿಸಲ್ಲ, ಒಮ್ಮೆ ತಿಂದು ಆಮೇಲೆ ತಿಂದಿಲ್ಲ. ಯಾರಿಗೇನು ಬೇಕೋ ಅದನ್ನು ತಿಂತಾರೆ. ತಿನ್ನು- ತಿನ್ನಬೇಡ ಅನ್ನೋದಕ್ಕೆ ಇವರ್ಯಾರು? ಎಂದು ಉಡುಪಿಯಲ್ಲಿ ಸಿಎಂ ಸಿದ್ದರಾಮಯ್ಯ ವಾಕ್ ಪ್ರಹಾರ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮೋದಿ ಜಾದು ನಡೆಯಲ್ಲ. ಕರ್ನಾಟಕ ಗುಜರಾತ್- ಯುಪಿ ಅಲ್ಲ. ಇದು ಬಸವಣ್ಣ, ಕನಕದಾಸ, ನಾರಾಯಣಗುರುಗಳ ನಾಡು. ಇಲ್ಲಿ ಮೋದಿ- ಷಾ ತಂತ್ರಗಳು ನಡೆಯಲ್ಲ ಎಂದಿದ್ದಾರೆ.