Asianet Suvarna News Asianet Suvarna News

ಕೆಪಿಎಸ್’ಸಿ ಸದಸ್ಯರ ಆಯ್ಕೆಯಲ್ಲೂ ಅಹಿಂದ ಲೆಕ್ಕಾಚಾರ

ಸಿಎಂ ಸಿದ್ಧರಾಮಯ್ಯ ಮತ್ತೆ ಅಹಿಂದ ಜಪ ಶುರುಮಾಡಿದ್ದಾರೆ. 2018 ನೇ ಸಾಲಿನ ವಿಧಾನಸಭಾ ಚುನಾವಣೆಯನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಅಹಿಂದ ವರ್ಗಕ್ಕೆ ಸೇರಿದವರನ್ನ ಆಯಕಟ್ಟಿನ ಜಾಗಗಳಲ್ಲಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಕೆಪಿಎಸ್​ಸಿ ಸದಸ್ಯರ ನೇಮಕಾತಿಯಲ್ಲಿ ಅಹಿಂದ ವರ್ಗಕ್ಕೆ ಪ್ರಾಶಸ್ತ್ಯ ನೀಡಿರುವುದೆ ಇದಕ್ಕೆ ಸಾಕ್ಷಿ.

CM Siddharamaiah Appointed Ahindas to KPSC

ಬೆಂಗಳೂರು (ಅ.30): ಸಿಎಂ ಸಿದ್ಧರಾಮಯ್ಯ ಮತ್ತೆ ಅಹಿಂದ ಜಪ ಶುರುಮಾಡಿದ್ದಾರೆ. 2018 ನೇ ಸಾಲಿನ ವಿಧಾನಸಭಾ ಚುನಾವಣೆಯನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಅಹಿಂದ ವರ್ಗಕ್ಕೆ ಸೇರಿದವರನ್ನ ಆಯಕಟ್ಟಿನ ಜಾಗಗಳಲ್ಲಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಕೆಪಿಎಸ್​ಸಿ ಸದಸ್ಯರ ನೇಮಕಾತಿಯಲ್ಲಿ ಅಹಿಂದ ವರ್ಗಕ್ಕೆ ಪ್ರಾಶಸ್ತ್ಯ ನೀಡಿರುವುದೆ ಇದಕ್ಕೆ ಸಾಕ್ಷಿ.

ಟಿಪ್ಪು ಜಯಂತಿ , ವಾಲ್ಮೀಕಿ ಜಯಂತಿ ಅಂತೇಲ್ಲ ಹಿಂದೂಳಿದ ವರ್ಗಗಳನ್ನ ಓಲೈಕೆ ಮಾಡಿದ ಸಿದ್ದರಾಮಯ್ಯ  ಸರ್ಕಾರ ಇದೀಗ , ಮತ್ತೊಮ್ಮೆ ಅಹಿಂದ ವರ್ಗವನ ಓಲೈಸೋದಕ್ಕೆ ಮುಂದಾಗಿದೆ. ಇಂದು ರಾಜ್ಯ ಸರ್ಕಾರ ಹೊರಡಿಸಿದ ಕೆಪಿಎಸ್​ಸಿ ನೂತನ ಸದಸ್ಯರಲ್ಲಿ ಹೆಚ್ಚಾಗಿ ಅಹಿಂದ ವರ್ಗದವರ ಹೆಸರೇ ಕಾಣಿಸಿದ್ದು ಇದಕ್ಕೊಂದು ನಿದರ್ಶನ. ಇನ್ನೂ ಇಂದು ಪ್ರಕಟವಾದ ಪಟ್ಟಿಯನ್ನ ನೋಡುವುದಾದರೆ  ಡಾ. ಎಚ್​. ರವಿಕುಮಾರ್​ - ಅಧೀಕ್ಷಕರು, ಕೆಸಿ ಜನರಲ್ ಆಸ್ಪತ್ರೆ, ಬೆಂಗಳೂರು ಇವರು ಮಡಿವಾಳ ಸಮಾಜದರಾಗಿದ್ರೆ, ಇತ್ತ ಸವಿತಾ ಸಮಾಜದ  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಲಕ್ಷ್ಮೀನಾರಾಯಣ ಅವರನ ಕೆಪಿಎಸ್​ಸಿಯ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಉಪ್ಪಾರ ಸಮಾಜದ ವಕೀಲ ಶ್ರೀಕಾಂತ್ ರಾವ್​ ಅವರು ಕೆಪಿಎಸ್​ಸಿಯಲ್ಲಿ ಸದಸ್ಯರ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ, ಸುತ್ತೂರು ಸ್ವಾಮೀಜಿ ಸಹೋದರ ಷಡಕ್ಷರಸ್ವಾಮಿ ಅವರು ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನು ಡಾ. ರವಿಕುಮಾರ್ ಸಿಎಂ ಆಪ್ತರ ಪಟ್ಟಿಯಲ್ಲಿ ಗುರುತಿಸಿಕೊಂಡವರು, ಕೆ ಸಿ ಜನರಲ್ ಆಸ್ಪತ್ರೆ ಸೂಪರಿಂಟೆಂಡೆಂಟ್ ಆಗಿರುವ ರವಿಕುಮಾರ್ ಸಿಎಂ ಸಿದ್ದರಾಮಯ್ಯ ಅವರ ಗೌರವಾನ್ವಿತ ಸರ್ಜನ್ ಕೂಡಾ ಹೌದು. ಇವರ ಹೆಸರನ್ನ ಈ ಹಿಂದೆಯೂ ಕೆಪಿಎಸ್​ಸಿ ಸದಸ್ಯರ ಸ್ಥಾನಕ್ಕೆ ಸೂಚಿಸಲಾಗಿತ್ತು, ಆದ್ರೆ ರವಿಕುಮಾರ್ ನೇಮಕ ಪ್ರಸ್ತಾಪವನ್ನ ರಾಜ್ಯಪಾಲರು  ತಿರಸ್ಕರಿಸಿದ್ದರು.  ಆದರೆ ಈ ಬಾರಿ ರವಿಕುಮಾರ ಕೆಪಿಎಸ್​ಸಿಗೆ ಲಗ್ಗೆ ಇಟ್ಟಿದ್ದಾರೆ. ಇನ್ನೂ ಈ ಬಗ್ಗೆ ಸುವರ್ಣನ್ಯೂಸ್​ ಜೊತೆ ಮಾತನಾಡಿದ ಡಾ. ರವಿಕುಮಾರ, ಸಿಎಂ ಆಪ್ತ ಅನ್ನೋ ಕಾರಣಕ್ಕೆ ನನಗೆ ಈ ಸ್ಥಾನ ಕೊಟ್ಟಿಲ್ಲ ಎಂದು ಹೇಳಿದ್ದಾರೆ.  ಒಟ್ಟಾರೆ, ವಿದ್ಯಮಾನಗಳನ್ನು ಗಮನಿಸಿದರೆ  ಐದು ತಿಂಗಳ ನಂತರ ನಡೆಯುವ ಚುನಾವಣೆಗೆ ಈಗಲೇ ತಯಾರಿ ನಡೆದಿರೋದಂತು ನಿಜ.

Latest Videos
Follow Us:
Download App:
  • android
  • ios