ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತ ರಾಜಕೀಯ ಪಕ್ಷಗಳ ಮತಬೇಟೆ ತೀವ್ರಗೊಂಡಿದ್ದು, ಜಾತಿ-ಸಮುದಾಯಗಳ ಓಲೈಕೆ ಜಾಸ್ತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲೂ ಪಕ್ಷವನ್ನ ಅಧಿಕಾರಕ್ಕೆ ತರೋದಕ್ಕಾಗಿ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಅಹಿಂದ ಜಪ ಶುರು ಮಾಡಿದ್ದು, ಅಹಿಂದ ಮಠಾಧೀಶರ ಓಲೈಕೆಗೆ ಮುಂದಾಗಿದ್ದಾರೆ.
ಬೆಂಗಳೂರು (ಅ.31: ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತ ರಾಜಕೀಯ ಪಕ್ಷಗಳ ಮತಬೇಟೆ ತೀವ್ರಗೊಂಡಿದ್ದು, ಜಾತಿ-ಸಮುದಾಯಗಳ ಓಲೈಕೆ ಜಾಸ್ತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲೂ ಪಕ್ಷವನ್ನ ಅಧಿಕಾರಕ್ಕೆ ತರೋದಕ್ಕಾಗಿ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಅಹಿಂದ ಜಪ ಶುರು ಮಾಡಿದ್ದು, ಅಹಿಂದ ಮಠಾಧೀಶರ ಓಲೈಕೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಜಯಮಹಲ್ನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ನಿವಾಸದಲ್ಲಿ ಅಹಿಂದ ಸ್ವಾಮೀಜಿಗಳಿಗೆ ಭೋಜನ ಕೂಟ ಆಯೋಜಿಸಲಾಗಿತ್ತು. ಪಕ್ಕಾ ಸಸ್ಯಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಭಾಗದ ಅಹಿಂದ ಸ್ವಾಮೀಜಿಗಳು ಔತಣಕೂಟದಲ್ಲಿ ಭಾಗಿಯಾಗಿದ್ರು. ಸಿಎಂ ಸಿದ್ದರಾಮಯ್ಯ ಮತ್ತು ಕೆಲ ಸಚಿವರು ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಹಿಂದ ಮತಗಳನ್ನು ‘ಕೈ’ ಹಿಡಿತಕ್ಕೆ ಸೆಳೆಯುವುದು ಈ ಕೂಟದ ಉದ್ದೇಶ ಎಂದು ಹೇಳಲಾಗುತ್ತಿದೆ.
ಭೋಜನ ಕೂಟಕ್ಕೂ ಮೊದಲು ಹಿಂದ ಸ್ವಾಮೀಜಿಗಳ ನಿಯೋಗ ಸಿದ್ದರಾಮಯ್ಯರನ್ನ ಭೇಟಿ ಮಾಡಿತ್ತು. ಹಿಂದ ಸಮುದಾಯದ 25 ಮಠಗಳ ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಿಗೆ ಬೆಂಗಳೂರಿನಲ್ಲಿ ಜಮೀನು ನೀಡುವ ಭರವಸೆಯನ್ನು ಮಠಾಧೀಶರ ನಿಯೋಗಕ್ಕೆ ಸಿಎಂ ಭರವಸೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕಾಶಿಯಿಂದ ಬಂದಿದ್ದ ಸುಮಾರು 20 ಮಂದಿ ನಾಗಾಸಾಧುಗಳು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನಡೆಸಿ, ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಅಂತ ಯಡಿಯೂರಪ್ಪನವರಿಗೆ ಆಶೀರ್ವಾದ ಮಾಡಿದ್ದರು. ಇವತ್ತು ಬ್ರಾಹ್ಮಣ ಪುರೋಹಿತರು ಬಿಎಸ್ ವೈ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪಗೆ ಆಶೀರ್ವಾದ ಮಾಡಿದ್ದಾರೆ. ಜೊತೆಗೆ ನವೆಂಬರ್ 2 ರಂದು ಆರಂಭವಾಗಲಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಒಟ್ಟಾರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳ ನಡುವೆ ಜಾತಿ ರಾಜಕೀಯ ಶುರುವಾಗಿದೆ.
