ಸಿದ್ದತೆ ಇಲ್ಲದೇ ನೋಟ್ ಬ್ಯಾನ್ ಮಾಡಿರುವುದರಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಹೀಗಾಗಿ ಹಳೆಯ 500, 1000 ನೋಟು ಚಲಾವಣೆಯನ್ನು ಡಿ.30ರವರೆಗೆ ವಿಸ್ತರಿಸಿ ಹೊಸ 500 ರೂಪಾಯಿ ನೋಟನ್ನು ಬೇಗ ಚಲಾವಣೆಗೆ ತರಬೇಕು. ಖಾಸಗಿ ಆಸ್ಪತ್ರೆಗಳು, ಬ್ಲಡ್ ಬ್ಯಾಂಕ್​ಗಳಲ್ಲಿ ಹಳೆಯ ನೋಟು ಚಲಾವಣೆಗೆ ಸೂಚನೆ ನೀಡಬೇಕು. ಸಣ್ಣ ಉದ್ದಿಮೆದಾರರು, ಗ್ರಾಹಕರ ಬಿಲ್ ಪಾವತಿಗೂ ಹಳೆಯ ನೋಟಿಗೆ ಅವಕಾಶ ಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು(ನ.15): ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ 500, ಸಾವಿರ ನೋಟು ಮುಖಬೆಲೆಯ ನೋಟನ್ನು ರದ್ದುಗೊಳಿಸಿದೆ ಅಂತಾ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಪ್ರಧಾನಿಗೂ ಪತ್ರ ಬರೆದಿದ್ದಾರೆ.