ಈವರೆಗೂ ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳ ಕುರಿತಾಗಿ ಕೇಳಿದ್ದೆವು ಆದರೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ. ಕವಿತಾ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಸಿಎಂ ಅಭಿನಯಿಸಲಿದ್ದಾರೆ.

ಬೆಂಗಳೂರು(ಜೂ.21): ಈವರೆಗೂ ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳ ಕುರಿತಾಗಿ ಕೇಳಿದ್ದೆವು ಆದರೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ. ಕವಿತಾ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಸಿಎಂ ಅಭಿನಯಿಸಲಿದ್ದಾರೆ.

ಮಕ್ಕಳ ಚಿತ್ರದಲ್ಲಿ ಸಿದ್ದರಾಮಯ್ಯ ಅಭಿನಯಿಸಲಿದ್ದು, ಕವಿತಾ ಲಂಕೇಶ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ‘ಸಮ್ಮರ್ ಹಾಲಿಡೇಸ್’ ಎಂಬ ಸಿನಿಮಾದಲ್ಲಿ ಸಿದ್ದರಾಮಯ್ಯ ನಟಿಸಲಿದ್ದು, ನಾಳೆ ಬೆಂಗಳೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಸಿದ್ದರಾಮಯ್ಯ ಅಭಿನಯ ಮಾಡಲಿದ್ದಾರೆ.