ಟಿಕೆಟ್ ಆಯ್ಕೆ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಸಚಿವರು ಹಾಗೂ ಹಿರಿಯ ನಾಯಕರ ಪುತ್ರರಿಗೆ ಟಿಕೆಟ್ ನೀಡುವ ಕುರಿತು ಚರ್ಚಿಸಲಿದ್ದಾರೆ.

ಬೆಂಗಳೂರು : ಟಿಕೆಟ್ ಆಯ್ಕೆ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಸಚಿವರು ಹಾಗೂ ಹಿರಿಯ ನಾಯಕರ ಪುತ್ರರಿಗೆ ಟಿಕೆಟ್ ನೀಡುವ ಕುರಿತು ಚರ್ಚಿಸಲಿದ್ದಾರೆ.

ಸಿಎಂ ಪುತ್ರ ಯತೀಂದ್ರ, ಸೇರಿದಂತೆ ಇತರೆ ಮೂವರು ನಾಯಕರ ಮಕ್ಕಳಿಗೆ ಟಿಕೆಟ್ ನೀಡಲು ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಒಪ್ಪಿದ್ದು, ವರುಣಾದಿಂದ ಸಿಎಂ ಪುತ್ರ ಯತೀಂದ್ರ. ಕೆ.ಜಿ.ಎಫ್ ಕ್ಷೇತ್ರದಿಂದ ಕೆ.ಎಚ್ ಮುನಿಯಪ್ಪ ಪುತ್ರಿ ರೂಪಾ, ಜಯನಗರದಿಂದ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಸೇರಿ ಈ ಮೂವರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ನಾಳೆಯ ಕೇಂದ್ರ ಕಾಂಗ್ರೆಸ್ ಚುನಾವಣಾ ಸಮಿತಿಯಲ್ಲಿ ಈ ಟಿಕೆಟ್’ಗಳಿಗೆ ಅಂಕಿತ ನೀಡುವ ಸಾಧ್ಯತೆ ಇದೆ.

ಉಳಿದ ನಾಯಕರ ಪುತ್ರರ ಟಿಕೆಟ್ ಬಗ್ಗೆಯೂ ಕೂಡ ಕೆಲವು ಹಿರಿಯ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಇತರೆ ನಾಯಕರ ಮಕ್ಕಳ ಪಟ್ಟಿಯಲ್ಲಿ ಚಿಕ್ಕನಾಯಕನಹಳ್ಳಿ - ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ, ತಿ ನರಸೀಪುರದಿಂದ ಎಚ್.ಸಿ ಮಹದೇವಪ್ಪ ಪುತ್ರ ಸುಭಾಷ್ ಬೋಸ್, ತುಮಕೂರು ಗ್ರಾಮಾಂತರದಿಂದ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ, ಶಿರಸಿಯಿಂದ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಹಾನಗಲ್’ನಿಂದ ಮನೋಹರ ತಹಶೀಲ್ದಾರ ಪುತ್ರ ರಾಘವೇಂದ್ರ ತಹಶೀಲ್ದಾರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.