ಕುರ್ಚಿಯಿಂದ ಬಿದ್ದ ಸಿಎಂ : ತಲೆಗೆ ಗಾಯ

CM Siddaramaiah Slip
Highlights

ಪ್ರಚಾರ ಸಂದರ್ಭದಲ್ಲಿ ತಾಲೂಕಿನ ಮಾವಿ​ನ​ಹಳ್ಳಿಯ ಕಾರ್ಯ​ಕರ್ತ ರಾಮೇ​ಗೌಡ ಅವರ ಮನೆ​ಯ​ಲ್ಲಿ ಸೋಮ​ವಾರ ಸಂಜೆ ತಿಂಡಿ ತಿನ್ನುವ ವೇಳೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಕುರ್ಚಿ​ಯಿಂದ ಆಯ​ತಪ್ಪಿ ಕೆಳಗೆ ಬಿದ್ದಿದ್ದು ತಲೆಗೆ ಸಣ್ಣ ಗಾಯವಾಗಿದೆ

ಮೈಸೂ​ರು​: ಪ್ರಚಾರ ಸಂದರ್ಭದಲ್ಲಿ ತಾಲೂಕಿನ ಮಾವಿ​ನ​ಹಳ್ಳಿಯ ಕಾರ್ಯ​ಕರ್ತ ರಾಮೇ​ಗೌಡ ಅವರ ಮನೆ​ಯ​ಲ್ಲಿ ಸೋಮ​ವಾರ ಸಂಜೆ ತಿಂಡಿ ತಿನ್ನುವ ವೇಳೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಕುರ್ಚಿ​ಯಿಂದ ಆಯ​ತಪ್ಪಿ ಕೆಳಗೆ ಬಿದ್ದಿದ್ದು ತಲೆಗೆ ಸಣ್ಣ ಗಾಯವಾಗಿದೆ.

 ಬೀಳುವ ವೇಳೆ ಹಿಂಬದಿ ಇದ್ದ ಷೋಕೇಸ್‌ಗೆ ತಲೆಗೆ ತಾಗಿತ್ತು. ಈ ವೇಳೆ ಸ್ಥಳದಲ್ಲೇ ಇದ್ದ ಪುತ್ರ ಡಾ.ಯತೀಂದ್ರ ತಕ್ಷಣ ಪರೀ​ಕ್ಷಿಸಿದ್ದಾರೆ. ಏನೂ ತೊಂದರೆ ಇಲ್ಲವೆಂದ ಬಳಿಕ ಮತ್ತೆ​ರಡು ಗ್ರಾಮ​ಗ​ಳಲ್ಲಿ ಪ್ರಚಾರ ಕಾರ್ಯ ಮುಂದು​ವ​ರೆ​ಸಿ​ದರು. ನಂತರ ಮೈಸೂ​ರಿಗೆ ತೆರಳಿ ಖಾಸಗಿ ಆಸ್ಪ​ತ್ರೆ​ಯಲ್ಲಿ ತಪಾ​ಸ​ಣೆ​ಗೊ​ಳ​ಗಾಗಿ ಬೆಂಗ​ಳೂ​ರಿಗೆ ತೆರ​ಳಿ​ದರು ಎಂದು ತಿಳಿ​ದು​ಬಂದಿ​ದೆ.

loader