ದೇವೇಗೌಡ್ರು ನನ್ನ ಬೆಳೆಸಿಲ್ಲ; ನನ್ನ ಸ್ವಂತ ಬಲದಿಂದ ಬೆಳೆದಿದ್ದೇನೆ: ಸಿಎಂ

First Published 28, Feb 2018, 1:13 PM IST
CM Siddaramaiah Slams PM Narendra Modi
Highlights

ಪ್ರಧಾನಿ ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ.  ಮೋದಿ ಕೀಳು ಮಟ್ಡದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ಕೊಪ್ಪಳ (ಫೆ. 28): ಪ್ರಧಾನಿ ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ.  ಮೋದಿ ಕೀಳು ಮಟ್ಡದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ರೈತರನ್ನು ಕೊಂದವರನ್ನು ಮೋದಿ ರೈತ ಬಂಧು ಅಂತಾ ಬಿರುದು ಕೊಡ್ತಾರೆ. ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿ ರೈತರನ್ನು ಕೊಂದವರು ಯಾರು ಎಂದು ಪ್ರಶ್ನಿಸಿದ್ದಾರೆ. ಇವರೆಲ್ಲಾ ರೈತ ಬಂಧು ಅಲ್ಲ. ಇವರೆಲ್ಲಾ ಡೋಂಗಿಗಳು. ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ. ಮಹದಾಯಿ ಸಮಸ್ಯೆಯನ್ನು  ಪ್ರಧಾನಿ ಮೋದಿ ಮಾತ್ರ ಬಗೆಹರಿಸಬಹುದು. ಕುಮಾರಸ್ವಾಮಿಯವರು ಅಧಿಕಾರದಲ್ಲೇ ಇದ್ದರೂ ಆಗ ಏನು ಮಾಡಲಿಲ್ಲ. ಒಟ್ಟಿನಲ್ಲಿ ಇವರಿಗೆ ರೈತರ ಬಗ್ಗೆ ನಯಾಪೈಸೆ ಕಾಳಜಿ ಇಲ್ಲ ಎಂದು ಸಿಎಂ ಹೇಳಿದ್ದಾರೆ. 

ಪ್ರಧಾನಿಯವರು ಅವರ ಸ್ಥಾನ ಮತ್ತು ಘನತೆಯನ್ನು ಹಾಳು ಮಾಡಿದ್ದಾರೆ.  ಮೋದಿ ಒಬ್ಬ ಚೌಕಿದಾರ ಅಂತಾರೆ. ನೀರವ್ ಮೋದಿ,ಲಲಿತಾ ಮೋದಿ ದೇಶ ಬಿಟ್ಟು ಹೋಗಲು ಪ್ರಧಾನಿ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಮೋದಿಗೆ ಭಷ್ಟ್ರಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ದಾಖಲೆ ಕೊಟ್ಟು ನಮ್ಮ  ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ನಾವು ಜನರಿಗೆ ಲೆಕ್ಕ ಕೊಡ್ತೀವಿ. ಅಮಿತ್ ಶಾ ಗೆ ಅಲ್ಲ ಎಂದು ಟಾಂಗ್ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ನನ್ನನ್ನು ದೇವೆಗೌಡರು ಬೆಳೆಸಿಲ್ಲ ಯಾರು ಬೆಳೆಸಿಲ್ಲ. ನಾನೇ  ನನ್ನ ಸ್ವಂತ ಬಲದ ಮೇಲೆ ಬೆಳೆದಿದ್ದೇನೆ ಎಂದಿದ್ದಾರೆ. 

loader