ನಾನಲ್ಲ ನನ್ನ ಹೆಣವೂ ಬಿಜೆಪಿ ಸೇರಲ್ಲ : ಈಶ್ವರಪ್ಪಗೆ ಸಿದ್ದರಾಮಯ್ಯ ಟಾಂಗ್

First Published 23, Feb 2018, 11:46 AM IST
CM Siddaramaiah Slams Eshwarappa
Highlights

ಪಕ್ಷಾಂತರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಎಸ್. ಈಶ್ವರಪ್ಪ ಮಧ್ಯ ವಾಗ್ಬಾಣಗಳ ವಿನಿಮಯ ಪ್ರಸಂಗ ಗುರುವಾರ ನಡೆಯಿತು. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆ ವೇಳೆ ಈಶ್ವರಪ್ಪ ಮಾತನಾಡುತ್ತಿದ್ದಾಗ ಮುಖ್ಯಮಂತ್ರಿ ಗಳು ಬಾಯಿ ತಪ್ಪಿ ಈಶ್ವರಪ್ಪ ಬದಲು ಯಡಿಯೂರಪ್ಪ ಎಂದು ಕರೆದರು.

ವಿಧಾನಪರಿಷತ್ತು: ಪಕ್ಷಾಂತರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಎಸ್. ಈಶ್ವರಪ್ಪ ಮಧ್ಯ ವಾಗ್ಬಾಣಗಳ ವಿನಿಮಯ ಪ್ರಸಂಗ ಗುರುವಾರ ನಡೆಯಿತು. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆ ವೇಳೆ ಈಶ್ವರಪ್ಪ ಮಾತನಾಡುತ್ತಿದ್ದಾಗ ಮುಖ್ಯಮಂತ್ರಿ ಗಳು ಬಾಯಿ ತಪ್ಪಿ ಈಶ್ವರಪ್ಪ ಬದಲು ಯಡಿಯೂರಪ್ಪ ಎಂದು ಕರೆದರು.

ಇದಕ್ಕೆ ‘ನಾನು ಈಶ್ವರಪ್ಪ’ ಎಂದು ಹೇಳಿ, ‘ಯಡಿಯೂರಪ್ಪ ಹೆಸರು ನಿಮ್ಮ ತಲೆಯಲ್ಲಿ ಹೊಕ್ಕಿದೆ’ ಎಂದು ಛೇಡಿಸಿದರು. ಆಗ, ‘ಏ ಈಶ್ವರಪ್ಪ ಆ ವಿಷಯ ಬಿಡು, ಯಡಿಯೂರಪ್ಪ ನಿನಗೆ ಟಿಕೆಟ್ ನೀಡದಂತೆ ಕತ್ತರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಮೊದಲು ಆ ಕಡೆ ಗಮನ ಕೊಡಪ್ಪ’ ಎಂದು ಎಚ್ಚರಿಕೆ ಕೊಟ್ಟರು.

ಆಗ ಈಶ್ವರಪ್ಪ, ‘ನಿಮ್ಮ ಹಾಗೆ ಟಿಕೆಟ್‌ಗಾಗಿ ಪಕ್ಷಾಂತರ ವಾಗುವುದಿಲ್ಲ. ನಿಮಗೇನಾದರೂ ಬಿಜೆಪಿ ಸೇರುವ ಆಸೆ ಬಂದಿ ದೆಯಾ?’ ಎಂದು ಕೆಣಕಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಗಳು, ‘ನಾನಲ್ಲ... ನನ್ನ ಹೆಣವೂ ಬಿಜೆಪಿಗೆ ಬರಲ್ಲ..’ ಎಂದರು. ತಕ್ಷಣ ಈಶ್ವರಪ್ಪ, ‘ನಾನು ಎಷ್ಟೇ ವರ್ಷವಾದರೂ ಬಿಜೆಪಿಯಲ್ಲಿಯೇ ಇರುತ್ತೇನೆ. ನೀವು ಕಾಂಗ್ರೆಸ್‌ನಲ್ಲಿಯೇ ಇರುತ್ತೀರಾ?’ ಎಂದರು. ‘ಕತ್ತು ಕೊಯ್ದರೂ ನಾನು ಬಿಜೆಪಿ ಬಿಡಲ್ಲ’ ಎಂದು ಹೇಳಿದರು.

loader