'ಶಿವಮೊಗ್ಗ ಜಿಲ್ಲೆಯ ಜನ ಮತ್ತೊಮ್ಮೆ ಬಿಎಸ್’ವೈ ಸಿಎಂ ಆಗಲು ಬಿಡಬಾರದು'

CM Siddaramaiah Slams BSY
Highlights

ಬಿಎಸ್’ವೈ  ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಶಿವಮೊಗ್ಗ ಜಿಲ್ಲೆಗೆ ಅಪಖ್ಯಾತಿ‌ ತಂದ್ರು.  ಸಿಎಂ ಆಗಿ  ಈ  ಜಿಲ್ಲೆಗೆ  ಇದ್ದ ಉತ್ತಮ ಹೆಸರನ್ನ  ಹಾಳುಮಾಡಿದ್ರು.  ಶಿವಮೊಗ್ಗ ಜಿಲ್ಲೆಯ ಜನ ಮತ್ತೊಮ್ಮೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ಬಿಡಬಾರದು ಎಂದು ಸಿಎಂ ಸಿದ್ದರಾಮಯ್ಯ ಬಿಎಸ್’ವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಶಿವಮೊಗ್ಗ (ಏ. 03):  ಬಿಎಸ್’ವೈ  ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಶಿವಮೊಗ್ಗ ಜಿಲ್ಲೆಗೆ ಅಪಖ್ಯಾತಿ‌ ತಂದ್ರು.  ಸಿಎಂ ಆಗಿ  ಈ  ಜಿಲ್ಲೆಗೆ  ಇದ್ದ ಉತ್ತಮ ಹೆಸರನ್ನ  ಹಾಳುಮಾಡಿದ್ರು. ಶಿವಮೊಗ್ಗ ಜಿಲ್ಲೆಯ ಜನ ಮತ್ತೊಮ್ಮೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ಬಿಡಬಾರದು ಎಂದು ಸಿಎಂ ಸಿದ್ದರಾಮಯ್ಯ ಬಿಎಸ್’ವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ. ಶಿವಮೊಗ್ಗ ರಾಜ್ಯಕ್ಕೆ ಸಾಕಷ್ಟು ಮುಖ್ಯಮಂತ್ರಿಗಳನ್ನ ಕೊಟ್ಟಿದೆ.  ಕಡದಾಳು ಮಂಜಪ್ಪ, ಬಂಗಾರಪ್ಪ, ಜೆ ಹೆಚ್ ಪಟೇಲರಂತಹ ಉತ್ತಮ ಮುಖ್ಯಮಂತ್ರಿಗಳನ್ನ ನೀಡಿದೆ.  ಆ ಮೂಲಕ ಶಿವಮೊಗ್ಗಕ್ಕೆ ಉತ್ತಮ ಹೆಸರನ್ನು ತಂದಿದ್ರು.  ಯಡಿಯೂರಪ್ಪ ಸಿಎಂ ಆಗಿ ಜೈಲಿಗೆ ಹೋಗುವ ಮೂಲಕ ಶಿವಮೊಗ್ಗಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದಿದ್ದಾರೆ.  

ಧರ್ಮ, ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚೋದೇ ಬಿಜೆಪಿಯವರ ಕೆಲಸವಾಗಿದೆ. ಅಂತ ಕೋಮು ಪಕ್ಷವನ್ನ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ. ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ ಟೀಕಿಸಿದರು.  ಆದರೆ ಹಸಿವಿನಿಂದ ಬಳಸಬಾರದು ಎಂದು ನೀಡಿದ್ದೇವೆ ಎಂದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಯಡಿಯೂರಪ್ಪ ಸಿಎಂ ಆದವರೂ ನೇರ ಜೈಲಿಗೆ ಹೋದರು. ಬಿಜೆಪಿ ಮತ್ತು ಜೆಡಿಎಸ್ ಇಬ್ಬರೂ ಇವರಪ್ಪನಾಣೆಗೂ ಅಧಿಕಾರಕ್ಕೆ ಬರೋಲ್ಲ.  ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಸಿಎಂ ಆಗುವ ಕನಸು ಈಡೇರಲ್ಲ.  ಜೆಡಿಎಸ್ ನವರು 25 ಶಾಸಕರು ಗೆದ್ದರೇ ಅದೇ ಸಾಧನೆ.  ಜೆಡಿಎಸ್  ಮತ್ತು  ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್’ಗೆ ನೀಡುವ ಮತ ಬಿಜೆಪಿಗೆ ಕೊಟ್ಟಂತೆ . ಅವಕಾಶವಾದಿ ಜೆಡಿಎಸ್, ಕೋಮುವಾದಿ ಬಿಜೆಪಿ ದೂರವಿಟ್ಟು ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು  ಹೇಳಿದ್ದಾರೆ. 

loader