ನನ್ನ ಮಗ ಚುನಾವಣೆಯಲ್ಲಿ ಟಿಕೆಟ್ ಕೇಳಿಲ್ಲ : ಸಿಎಂ

First Published 15, Mar 2018, 1:44 PM IST
CM Siddaramaiah Slams BS Yeddyurappa And Eshwarappa
Highlights

ನನ್ನ ಪುತ್ರ ಚುನಾವಣೆಯಲ್ಲಿ ಟಿಕೆಟ್ ಕೇಳಿಲ್ಲ. ಆದರೆ ಜನರ ಅಪೇಕ್ಷೆ ಮೇರೆಗೆ  ಚುನಾವಣಾ ಕಣಕ್ಕೆ ಇಳಿಯಲು ತೀರ್ಮಾನ ಮಾಡಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರದುರ್ಗದ ಹೊಸ ದುರ್ಗದಲ್ಲಿ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗ : ನನ್ನ ಪುತ್ರ ಚುನಾವಣೆಯಲ್ಲಿ ಟಿಕೆಟ್ ಕೇಳಿಲ್ಲ. ಆದರೆ ಜನರ ಅಪೇಕ್ಷೆ ಮೇರೆಗೆ  ಚುನಾವಣಾ ಕಣಕ್ಕೆ ಇಳಿಯಲು ತೀರ್ಮಾನ ಮಾಡಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರದುರ್ಗದ ಹೊಸ ದುರ್ಗದಲ್ಲಿ ಹೇಳಿಕೆ ನೀಡಿದ್ದಾರೆ.

ವೀಕ್ಷಕರ ಸರ್ವೆ ಮೇರೆಗೆ ಯಾರಿಗೆ ಟಿಕೆಟ್ ನೀಡಬೇಕು ಎಂದು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೆಲವು ಮಠಾಧೀಶರು ಹಾಗೂ ಶಾಸಕರ ಮಕ್ಕಳೂ ಕೂಡ ಟಿಕೆಟ್’ಗೆ ಬೇಡಿಕೆ ಇಟ್ಟಿದ್ದಾರೆ. ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಇನ್ನು ಇದೇ ವೇಳೆ ಲಿಂಗಾಯತ ಪ್ರತ್ಯೆಕ ಧರ್ಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಪ್ರತ್ಯೇಕ ಧರ್ಮ ರಚನೆ ಮಾಡುವ ಅಗತ್ಯವಿಲ್ಲ ಎಂದು ಮಠಾಧೀಶರು ಹೇಳಿದ್ದಾರೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.  

ಇದೇ ವೇಳೆ ಈಶ್ವರಪ್ಪಗೆ ಬಿಜೆಪಿಯಲ್ಲಿ ಇನ್ನೂ ಟಿಕೆಟ್ ಪಕ್ಕಾ ಆಗಿಲ್ಲ.  ಯಡಿಯೂರಪ್ಪ  ಓರ್ವ ದೊಡ್ಡ ಸುಳ್ಳುಗಾರ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಅಲ್ಲಿ ಸಲ್ಲದವರೂ ಇಲ್ಲಿಯೂ ಸಲ್ಲುವುದಿಲ್ಲ ಎಂದು ಹೇಳಿದ್ದಾರೆ.

loader