ಬಿಎಸ್‌ವೈ ಕಾಂಗ್ರೆಸ್ಸಿಗೆ ಬರ್ತೀನಿ ಅಂದರೂ ಸೇರಿಸಲ್ಲ: ಸಿಎಂ

CM Siddaramaiah Slams BS Yeddyurappa
Highlights

ಹುಟ್ಟು ಕಾಂಗ್ರೆ​ಸ್ಸಿ​ಗ​ರು, ಯಜ​ಮಾ​ನರೂ ಆದ ಡಾ.ಶಾ​ಮ​ನೂರು ಶಿವ​ಶಂಕ​ರಪ್ಪ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಡಿಸ್ಟ​ರ್ಬ್‌ ಆಗಿ​ರು​ವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿ​ಯೂ​ರಪ್ಪ ಆಕ​ಸ್ಮಾತ್‌ ಕಾಂಗ್ರೆ​ಸ್ಸಿಗೆ ಬರು​ತ್ತೇ​ವೆಂದರೂ ನಾವಂತೂ ಸೇರಿ​ಸಿಕೊಳ್ಳುವುದಿಲ್ಲ ಎಂದು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಹೇಳಿದ್ದಾರೆ.

ದಾವ​ಣ​ಗೆರೆ: ಹುಟ್ಟು ಕಾಂಗ್ರೆ​ಸ್ಸಿ​ಗ​ರು, ಯಜ​ಮಾ​ನರೂ ಆದ ಡಾ.ಶಾ​ಮ​ನೂರು ಶಿವ​ಶಂಕ​ರಪ್ಪ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಡಿಸ್ಟ​ರ್ಬ್‌ ಆಗಿ​ರು​ವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿ​ಯೂ​ರಪ್ಪ ಆಕ​ಸ್ಮಾತ್‌ ಕಾಂಗ್ರೆ​ಸ್ಸಿಗೆ ಬರು​ತ್ತೇ​ವೆಂದರೂ ನಾವಂತೂ ಸೇರಿ​ಸಿಕೊಳ್ಳುವುದಿಲ್ಲ ಎಂದು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಹೇಳಿದ್ದಾರೆ.

ನಗ​ರದ ಹೈಸ್ಕೂಲ್‌ ಮೈದಾ​ನ​ದಲ್ಲಿ .3 ಸಾವಿರ ಕೋಟಿ ವೆಚ್ಚದ ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿಗೆ ಶಂಕು ಸ್ಥಾಪನೆ, ಉದ್ಘಾ​ಟನೆ ನೆರ​ವೇ​ರಿಸಿ ಮಾತ​ನಾ​ಡಿ, ತುಮ​ಕೂ​ರಿ​ನಲ್ಲಿ ಶಾಮ​ನೂರು ಶಿವ​ಶಂಕ​ರಪ್ಪ ಹಾಗೂ ಯಡಿ​ಯೂ​ರಪ್ಪ ಜೊತೆಗೆ ಕುಳಿತು ಊಟ ಮಾಡಿ​ರ​ಬ​ಹುದು. ಆಕ​ಸ್ಮಿ​ಕ​ವಾಗಿ ಸಮಾ​ಜದ ವಿಚಾರ, ಪಕ್ಷದ ವಿಚಾರ ಮಾತ​ನಾ​ಡಿ​ರ​ಬ​ಹುದು. ಆದರೆ, ಯಾವುದೇ ಕಾರ​ಣಕ್ಕೂ ಶಾಮ​ನೂರು ಕಾಂಗ್ರೆಸ್‌ ಬಿಡು​ವುದಿಲ್ಲ ಎಂದರು.

ಯಡಿ​ಯೂ​ರಪ್ಪ ಭೇಟಿ ಹಿನ್ನೆ​ಲೆ​ಯಲ್ಲಿ ಉಂಟಾದ ವದಂತಿಗೆ ಶಾಮ​ನೂರು ಶಿವ​ಶಂಕ​ರಪ್ಪ ಸೌಜನ್ಯ​ದಿಂದ ಪ್ರತಿ​ಕ್ರಿ​ಯಿ​ಸಿ​ದ್ದಾರೆ. ಕೋಮು​ವಾದಿ ಆರೆ​ಸ್ಸೆಸ್‌, ಬಿಜೆ​ಪಿಯ ಯಡಿ​ಯೂ​ರಪ್ಪ ಜೈಲಿಗೆ ಹೋಗಿ ಬಂದ​ವರು. ಲಂಚದ ಹಣ​ವನ್ನು ಚೆಕ್‌​ನಲ್ಲಿ ಪಡೆ​ದ ವ್ಯಕ್ತಿ. ಇಂತ​ಹ​ವ​ರನ್ನು ನಾವು ಪಕ್ಷಕ್ಕೆ ಕಾಲಿ​ಡಲೂ ಬಿಡಲ್ಲ ಎಂದು ಹೇಳಿ​ದರು.

3 ಸ್ಥಾನ ನಾವೇ ಗೆಲ್ಲು​ತ್ತೇ​ವೆ:

ರಾಜ್ಯ​ಸಭೆ ಚುನಾ​ವ​ಣೆ​ಯಲ್ಲಿ ಮೂರು ಸ್ಥಾನ​ಗ​ಳಲ್ಲಿ ನಾವೇ ಗೆಲುವು ಸಾಧಿ​ಸ​ಲಿದ್ದು, ನಮಗೆ ಯಾರ ಬೆಂಬ​ಲವೂ ಬೇಕಿಲ್ಲ. ಕಾಂಗ್ರೆಸ್‌ನ ಮೂವ​ರು ಅಭ್ಯ​ರ್ಥಿ​ಗಳೂ ಜಯ ಸಾಧಿ​ಸುತ್ತಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇನ್ನೂ ಹತ್ತಾರು ಬಾರಿ ಕರ್ನಾ​ಟ​ಕಕ್ಕೆ ಬಂದರೂ, ಬರಲಿರುವ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ನಾವೇ ಗೆಲ್ಲು​ತ್ತೇವೆ, ಕಾಂಗ್ರೆಸ್‌ ಪಕ್ಷವೇ ಮತ್ತೆ ಅಧಿ​ಕಾ​ರಕ್ಕೆ ಬರು​ತ್ತದೆ ಎಂದು ಸಿದ್ದ​ರಾ​ಮಯ್ಯ ಪುನ​ರು​ಚ್ಛ​ರಿ​ಸಿ​ದರು.

ರಾಜ್ಯ ವಿಧಾನ​ಸಭೆ ಚುನಾ​ವ​ಣೆಗೆ ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಆಯ್ಕೆ ಕುರಿ​ತಂತೆ ಬುಧವಾರ ಪಕ್ಷದ ಚುನಾ​ವಣಾ ಸಮಿತಿ ಸಭೆ ನಡೆ​ಯ​ಲಿದೆ. ಈ ಸಮಿ​ತಿಯ ವರ​ದಿಯನ್ನು ಸ್ಕ್ರೀನಿಂಗ್‌ ಸಮಿತಿ ಪರಾ​ಮ​ರ್ಶಿಸಿ, ಎಐ​ಸಿಸಿಗೆ ಕಳಿ​ಸು​ತ್ತದೆ. ಅಲ್ಲಿ ಅಭ್ಯ​ರ್ಥಿ​ಗಳ ಅಂತಿಮ ಪಟ್ಟಿಕುರಿ​ತಂತೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

- ಸಿದ್ದ​ರಾ​ಮಯ್ಯ, ಮುಖ್ಯ​ಮಂತ್ರಿ

loader