Asianet Suvarna News Asianet Suvarna News

ಸರ್ಕಾರದ ಭಾಗ್ಯಗಳಿಂದ ಕಾಂಗ್ರೆಸ್’ಗೆ ಒಲಿಯುವಳೇ ವಿಜಯಲಕ್ಷ್ಮೀ..?

ಸಾಮಾಜಿಕ ನ್ಯಾಯ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ‘ಭಾಗ್ಯ’ ಸರಣಿಯ ಯೋಜನೆಗಳಿಂದಾಗಿ ಬೊಕ್ಕಸದ ಮೇಲೆ ಹೊರೆ ಬೀಳುತ್ತಿರಬಹುದು. ಟೀಕೆಗಳು ವ್ಯಕ್ತವಾಗುತ್ತಿರಬಹುದು. ಆದರೆ ಈ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಸರ್ಕಾರದ ‘ಮತ ಬ್ಯಾಂಕ್’ಗೆ ಒಳ್ಳೆಯದೇ ಆಗುತ್ತಿದೆ ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ.

CM Siddaramaiah schemes May help to win congress

ಬೆಂಗಳೂರು(ಡಿ.6): ಸಾಮಾಜಿಕ ನ್ಯಾಯ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ‘ಭಾಗ್ಯ’ ಸರಣಿಯ ಯೋಜನೆಗಳಿಂದಾಗಿ ಬೊಕ್ಕಸದ ಮೇಲೆ ಹೊರೆ ಬೀಳುತ್ತಿರಬಹುದು. ಟೀಕೆಗಳು ವ್ಯಕ್ತವಾಗುತ್ತಿರಬಹುದು. ಆದರೆ ಈ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಸರ್ಕಾರದ ‘ಮತ ಬ್ಯಾಂಕ್’ಗೆ ಒಳ್ಳೆಯದೇ ಆಗುತ್ತಿದೆ ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ.

CM Siddaramaiah schemes May help to win congress

ಈ ಯೋಜನೆಗಳು ರಾಜಕೀಯ ತಂತ್ರ ಗಳಾಗಿದ್ದರೂ, ಕಾಂಗ್ರೆಸ್ಸಿನ ಮತ ಬ್ಯಾಂಕಿಗೆ ಸಹಾಯಕ ವಾಗಿವೆ ಎಂದು ರಾಜ್ಯದ ಶೇ.34  ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.17 ಮಂದಿ ನಿಶ್ಚಿತವಾಗಿಯೂ ಇದರಿಂದ ಸಹಾಯವಾಗಿದೆ ಎಂದು ಹೇಳಿದ್ದಾರೆ. ಇವೆರಡೂ ಅಭಿಪ್ರಾಯವನ್ನು ಕೂಡಿಸಿ ನೋಡುವುದಾದರೆ, ಸಿದ್ದು ಸರ್ಕಾರ ಖುಷಿ ಪಡಬಹುದು. ವಿಶೇಷ ಎಂದರೆ, ಲಿಂಗಾಯುತ ಪ್ರಾಬಲ್ಯವಿರುವ, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಮುಂಬೈ ಕರ್ನಾಟಕ ಭಾಗದಲ್ಲಿ ಶೇ.51ರಷ್ಟು ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿರುವುದು ಪ್ರತಿಪಕ್ಷದ ಪಾಲಿಗೆ ಎಚ್ಚರಿಕೆಯ ಗಂಟೆ.

ಕರಾವಳಿಯಲ್ಲಿ ತದ್ವಿರುದ್ಧ ಅಭಿಪ್ರಾಯವಿರುವು ದರಿಂದ ಬಿಜೆಪಿ ನಿಟ್ಟುಸಿರು ಬಿಡಬಹುದು. ಜನಪ್ರಿಯ ಯೋಜನೆಗಳಿಂದ ಜನರ ವಿಶ್ವಾಸ ಗಳಿಸಬಹುದು ಎಂಬ ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಫಲ ನೀಡುತ್ತಿರುವ ಸೂಚನೆ ಇದು.

Follow Us:
Download App:
  • android
  • ios