ಬಿಜೆಪಿಯವರ ವಿರುದ್ಧ ಹರಿಹಾಯ್ದ ಸಿಎಂ, ಭಾರತೀಯ ಜನತಾ ಪಕ್ಷ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. "ನಾನು ಜಾತಿ ರಾಜಕಾರಣ ಮಾಡುತ್ತಿದ್ದೇನೆಂದು ಹೇಳುತ್ತಿರುವ ಬಿಜೆಪಿಯವರೇ ಮಹಾನ್ ಜಾತಿವಾದಿಗಳು. ಎಲ್ಲದರಲ್ಲೂ ಅವರಿಗೆ ಜಾತಿ-ಧರ್ಮವೇ ಕಾಣುತ್ತದೆ" ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಂಗಳೂರು(ಜುಲೈ 26): ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಕೊಡಬೇಕೆನ್ನುವ ಹೊಸ ವಿವಾದದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ. ಸ್ವತಂತ್ರ ಧರ್ಮದ ಬಗ್ಗೆ ನಮಗೆ ಮನವಿಯೇ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಶಿಫಾರಸು ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೊದಲು ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಬೇಕೆನ್ನುವ ಮನವಿ ಬರಲಿ, ಆಮೇಲೆ ಶಿಫಾರಸಿನ ಬಗ್ಗೆ ಯೋಚಿಸೋಣ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, ಬಿಜೆಪಿಯವರ ವಿರುದ್ಧ ಹರಿಹಾಯ್ದ ಸಿಎಂ, ಭಾರತೀಯ ಜನತಾ ಪಕ್ಷ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. "ನಾನು ಜಾತಿ ರಾಜಕಾರಣ ಮಾಡುತ್ತಿದ್ದೇನೆಂದು ಹೇಳುತ್ತಿರುವ ಬಿಜೆಪಿಯವರೇ ಮಹಾನ್ ಜಾತಿವಾದಿಗಳು. ಎಲ್ಲದರಲ್ಲೂ ಅವರಿಗೆ ಜಾತಿ-ಧರ್ಮವೇ ಕಾಣುತ್ತದೆ" ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.