ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಇವತ್ತು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭ ಸಿಲ್ಕ್ ಬೋರ್ಡ್ ನಿರ್ದೇಶಕಿ ನೀಲಾ ಮಂಜುನಾಥ್ ನೀಡಿದ ಪ್ಯಾಕ್ ಮಾಡಿದ್ದ ಗಿಫ್ಟ್ ಅನ್ನ ಸಿಎಂ ಸಿದ್ದರಾಮಯ್ಯ ನಿರಾಕರಿಸಿದ ಘಟನೆ ನಡೆದಿದೆ. ನೀಲಾ ಮಂಜುನಾಥ್ ನೀಡಿದ ಗಿಫ್ಟ್ ಅನ್ನ ಸಚಿವ ಎ. ಮಂಜು ಅವರು ಸಿಎಂಗೆ ನೀಡಲು ಮುಂದಾದರು. ಈ ಸಂದರ್ಭ ೇನದು ಎಂದು ಪ್ರಶ್ನಿಸಿದ ಸಿಎಂ, ಗಿಫ್ಟ್ ಸಹವಾಸ ಬೇಡಪ್ಪಾ ಎಂದು ತಳ್ಳ್ಳಿದ್ದಾರೆ.

ವಿಧಾನಸೌಧ(ಅ.18): ಹ್ಯೂಬ್ಲೋಟ್ ಗಿಫ್ಟ್ ಪ್ರಕರಣ ಸಿಎಂ ಸಿದ್ದರಾಮಯ್ಯನವರನ್ನ ಎಷ್ಟರಮಟ್ಟಿಗೆ ಹೈರಾಣಾಗಿಸಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಗಿಫ್ಟ್ ಎಂದರೆ ಸಿಎಂ ಸಿದ್ದರಾಮಯ್ಯ ಬೆಚ್ಚಿ ಬೀಳುವ ಹಂತಕ್ಕೆ ತಂದು ನಿಲ್ಲಿಸಿದೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಇವತ್ತು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭ ಸಿಲ್ಕ್ ಬೋರ್ಡ್ ನಿರ್ದೇಶಕಿ ನೀಲಾ ಮಂಜುನಾಥ್ ನೀಡಿದ ಪ್ಯಾಕ್ ಮಾಡಿದ್ದ ಗಿಫ್ಟ್ ಅನ್ನ ಸಿಎಂ ಸಿದ್ದರಾಮಯ್ಯ ನಿರಾಕರಿಸಿದ ಘಟನೆ ನಡೆದಿದೆ. ನೀಲಾ ಮಂಜುನಾಥ್ ನೀಡಿದ ಗಿಫ್ಟ್ ಅನ್ನ ಸಚಿವ ಎ. ಮಂಜು ಅವರು ಸಿಎಂಗೆ ನೀಡಲು ಮುಂದಾದರು. ಈ ಸಂದರ್ಭ ೇನದು ಎಂದು ಪ್ರಶ್ನಿಸಿದ ಸಿಎಂ, ಗಿಫ್ಟ್ ಸಹವಾಸ ಬೇಡಪ್ಪಾ ಎಂದು ತಳ್ಳ್ಳಿದ್ದಾರೆ.

ವಾಚ್ ಗಿಫ್ಟ್ ವಿವಾದದ ಗುಂಗಿನಿಂದ ಸಿಎಂ ಸಿದ್ದರಾಮಯ್ಯ ಹೊರಬರದೇ ಇರುವುದು ಇದರಿಂದ ಸ್ಪಷ್ಟವಾಗಿದೆ.