ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಗೋವಿಂದರಾಜು ಫೇಕ್ ಡೈರಿ ಅಂತ ಹೇಳಿದ್ದಾರೆ. ಪದೇ ಪದೇ ಬಿಎಸ್ ವೈ ಇದನ್ನೇ ಆರೋಪಿಸುತ್ತಿದ್ದಾರೆ. ಇದು ಸರ್ಕಾರದ ಅಸ್ತಿತ್ವ ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಯಡಿಯೂರಪ್ಪ ದೇಶ ಕಂಡ ಭ್ರಷ್ಟರಾಜಕಾರಣಿ ಅಂತಾ ಕಿಡಿಕಾರಿದ್ದಾರೆ.
ಬೆಂಗಳೂರು(ಮಾ.01): ನಿನ್ನೆಯಷ್ಟೇ ಡೈರಿ ವಿಚಾರ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ ಇಂದು ಬಿಎಎಸ್ವೈ ವಿರುದ್ಧ ಮತ್ತೆ ಗುಡುಗಿದ್ದಾರೆ.