ಕರ್ನಾಟಕ ಸಿಎಂ ಸಿದ್ಧರಾಮಯ್ಯ ತಮಿಳುನಾಡಿನ ರಾಜಕೀಯದಲ್ಲಿ ತನ್ನ ಅಳಿಯದ ಛಾಪು ಮೂಡಿಸಿದ್ದ ಜಯಾ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಜಯಲಲಿತಾ ಮೃತರಾದ ಹಿನ್ನೆಲೆಯಲ್ಲಿ ಗೌರವ ಸೂಚಕವಾಗಿ ಕರ್ನಾಟಕದಲ್ಲಿ ಒಂದು ಶೋಕಾಚರಣೆ ಆಚರಿಸಲಾಗಿದೆ.
ಚೆನ್ನೈ(ಡಿ.06): ತಮಿಳುನಾಡಿನ ಜನತೆಯ ಪಾಲಿನ 'ಅಮ್ಮ'. ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ ಉಕ್ಕಿನ ಮಹಿಳೆ ಇದೀಗ ಈ ಲೋಕವನ್ನು ತೊರೆದು ಅಸ್ತಂಗತರಾಗಿದ್ದಾರೆ. ತಮಿಳುನಾಡಿನ ಜನತೆ ಅನಾಥರಾಗಿದ್ದಾರೆ. ಜಯಲಲಿತಾ ಸಾವಿಗೆ ಜನರು ಕಂಬನಿ ಮಿಡಿದಿದ್ದಾರೆ. ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆಸೇರಿ 74 ದಿನಗಳ ಸಾವು ಬದುಕಿನ , ಹೋರಾಟ ನಡೆಸಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಜಯಲಲಿತಾ ಅಂತಿಮ ದರ್ಶನಕ್ಕೆ ಗಣ್ಯಾತಿಗಣ್ಯರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.