ರಾಷ್ಟ್ರಪತಿಯನ್ನು ಬೀಳ್ಕೊಡಲು ಸಿದ್ದರಾಮಯ್ಯ ಹೆಚ್’ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು, ಆದರೆ ಅಧಿಕೃತ ನಿವಾಸ ಕಾವೇರಿಗೆ ವಾಪಸ್ಸಾಗದೇ ಸಿಎಂ ರಹಸ್ಯ ಮಾತುಕತೆಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು: ಪಕ್ಷದ ಆಂತರೀಕ ವಿಚಾರಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ರಹಸ್ಯವಾಗಿ ಚರ್ಚೆ ನಡೆಸುತ್ತಿದ್ದಾರೆ.

ತಿಂಡಿ ಸೇವನೆ ನೆಪದಲ್ಲಿ ರಹಸ್ಯ ಸ್ಥಳಕ್ಕೆ ತೆರಳಿರುವ ಸಿಎಂ ಪರಮೇಶ್ವರ್ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಪಕ್ಷಕ್ಕಾದ ಮುಖಭಂಗ, ಸಂಪುಟ ವಿಸ್ತರಣೆ , ಅಧಿವೇಶನದ ಬಳಿಕ ಗೃಹಖಾತೆ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಉಭಯನಾಯಕರು ರಹಸ್ಯ ಸ್ಥಳದಲ್ಲಿ ಚರ್ಚೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯಗಿದೆ..

ರಾಷ್ಟ್ರಪತಿಯನ್ನು ಬೀಳ್ಕೊಡಲು ಸಿದ್ದರಾಮಯ್ಯ ಹೆಚ್’ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು, ಆದರೆ ಅಧಿಕೃತ ನಿವಾಸ ಕಾವೇರಿಗೆ ವಾಪಸ್ಸಾಗದೇ ಸಿಎಂ ರಹಸ್ಯ ಮಾತುಕತೆಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.