ಸಿಎಂ ಸಿದ್ದರಾಮಯ್ಯಗೆ ಅವರ ತವರಿನಲ್ಲಿಯೇ ಆಹ್ವಾನ ಸಿಕ್ಕಿಲ್ಲ.  ಪ್ರಧಾನಿ ನರೇಂದ್ರ  ಮೋದಿ ಭಾಗಿಯಾಗುವ ಸರ್ಕಾರಿ ಕಾರ್ಯಕ್ರಮಕ್ಕೆ ಸಿಎಂನ್ನು ಇನ್ನೂ ಆಹ್ವಾನಿಸಿಲ್ಲ. 

ಬೆಂಗಳೂರು (ಫೆ. 17): ಸಿಎಂ ಸಿದ್ದರಾಮಯ್ಯಗೆ ಅವರ ತವರಿನಲ್ಲಿಯೇ ಆಹ್ವಾನ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಸರ್ಕಾರಿ ಕಾರ್ಯಕ್ರಮಕ್ಕೆ ಸಿಎಂನ್ನು ಇನ್ನೂ ಆಹ್ವಾನಿಸಿಲ್ಲ. 

ಫೆ.19 ರಂದು ಮೈಸೂರಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ನಾಳೆ ರಾತ್ರಿ ಮೈಸೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನಲೆಯಲ್ಲಿ ಪ್ರೋಟೋಕಾಲ್ ಪ್ರಕಾರ ಅವರನ್ನು ಬರ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿದ್ದಾರೆ. ಆದರೆ ಬಿಜೆಪಿಯಿಂದ ಸಿಎಂಗೆ ಆಹ್ವಾನ ಬಂದಿಲ್ಲ. ರಾತ್ರಿ11ಕ್ಕೆ ಮಂಡಕಳ್ಳಿ ಏರ್​ಪೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಮೋದಿಗೆ ಸ್ವಾಗತ ಕೋರಲಿದ್ದಾರೆ. 

ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ವಿವಿಧ ಕಾರ್ಯಕ್ರಮಗಳು, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.