ರಾಜ್ಯ ಸರ್ಕಾರ ಮತ್ತು ವಿಧಾನಮಂಡಲ ಸಚಿವಾಲಯದ ಮಧ್ಯೆ ಕಂದಕ ತಂದಿಟ್ಟಿತಾ ವಿಧಾನಸೌಧ ವಜ್ರಮಹೋತ್ಸವ? ವಜ್ರಮಹೋತ್ಸವಕ್ಕೂ ತನಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದೆಯಾ ರಾಜ್ಯ ಸರ್ಕಾರ? ಅದ್ದೂರಿ ವೆಚ್ಚಕ್ಕೆ ಕಡಿವಾಣ ಹಾಕಿ ಸಾರ್ವಜನಿಕ ಟೀಕೆಗಳಿಂದ ತಪ್ಪಿಸಿಕೊಳ್ಳಲು‌ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರಾ? ಹೌದು ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಿದೆ.
ಬೆಂಗಳೂರು(ಅ.20): ರಾಜ್ಯ ಸರ್ಕಾರ ಮತ್ತು ವಿಧಾನಮಂಡಲ ಸಚಿವಾಲಯದ ಮಧ್ಯೆ ಕಂದಕ ತಂದಿಟ್ಟಿತಾ ವಿಧಾನಸೌಧ ವಜ್ರಮಹೋತ್ಸವ? ವಜ್ರಮಹೋತ್ಸವಕ್ಕೂ ತನಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದೆಯಾ ರಾಜ್ಯ ಸರ್ಕಾರ? ಅದ್ದೂರಿ ವೆಚ್ಚಕ್ಕೆ ಕಡಿವಾಣ ಹಾಕಿ ಸಾರ್ವಜನಿಕ ಟೀಕೆಗಳಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರಾ? ಹೌದು ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಿದೆ.
ಅಕ್ಟೋಬರ್ 21 ಕ್ಕೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ವಜ್ರಮಹೋತ್ಸವ ದಿನದಿಂದೇ ನಡೆಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಬಳಿಕ ಯಾವುದೇ ಸಾಕ್ಷ್ಯಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಸಚಿವ ಸಂಪುಟ ಸಭೆ ನಿಗದಿ ಮಾಡಿದ್ದಾರಾ ಎಂಬ ಅನುಮಾನ ಮೂಡಿದೆ.
ಅದ್ದೂರಿ, ಅನಗತ್ಯ ವೆಚ್ಚದ ಟೀಕೆಯಿಂದ ತಪ್ಪಿಸಿಕೊಳ್ಳಲು ವಜ್ರ ಮಹೋತ್ಸವಕ್ಕೂ ತನಗೂ ಸಂಬಂಧ ಇಲ್ಲ ಎಂದು ಬಿಂಬಿಸಿಕೊಳ್ಳಲು ಸರ್ಕಾರ ಯತ್ನ ನಡೆಸುತ್ತಿದೆಯಾ ಎಂಬ ಅನುಮಾನ ಕೂಡ ಇದೆ. ಇನ್ನೂ ವಜ್ರಮಹೋತ್ಸವ ದಿನದಂದೇ ಸಚಿವ ಸಂಪುಟ ಸಭೆ ನಿಗದಿ ಮಾಡಿರುವ ಸರ್ಕಾರದ ಕ್ರಮಕ್ಕೆ ವಿಧಾನ ಮಂಡಲ ಸಚಿವಾಲಯದ ಮುಖ್ಯಸ್ಥರಿಂದ ಆಂತರಿಕ ಅಸಮಾಧಾನ ವ್ಯಕ್ತವಾಗಿದ್ದು ಈವರೆಗೂ ಕಾರ್ಯಕ್ರಮದ ಆಹ್ವಾನ ಪತ್ರಿಕೆಕೂಡ ಮುದ್ರಣವಾಗಿಲ್ಲ.
ಒಟ್ಟಾರೆ ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮ ಪ್ರತಿಷ್ಟೆಗೆ ಬಲಿಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
