ಸಿಎಂ ಸಿದ್ದರಾಮಯ್ಯ ಇದೀಗ ಧರ್ಮ ಸಂಕಟಕ್ಕೆ ಸಿಲುಕಿದ್ದಾರಂತೆ. ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಜೂನ್​ 18ಕ್ಕೆ ರಾಷ್ಟ್ರಪತಿಗಳು ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಶಿಷ್ಟಾಚಾರ ಪ್ರಕಾರ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿಗಳ ಜೊತೆಗೆ ಇರಬೇಕು. ಮತ್ತು ಅವರ ಜೊತೆಗೆ ಕೃಷ್ಣಮಠಕ್ಕೂ ಹೋಗಲೇಬೇಕಾಗಿದೆ.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇದೀಗ ಧರ್ಮ ಸಂಕಟಕ್ಕೆ ಸಿಲುಕಿದ್ದಾರಂತೆ. ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.

ಜೂನ್​ 18ಕ್ಕೆ ರಾಷ್ಟ್ರಪತಿಗಳು ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಶಿಷ್ಟಾಚಾರ ಪ್ರಕಾರ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿಗಳ ಜೊತೆಗೆ ಇರಬೇಕು. ಮತ್ತು ಅವರ ಜೊತೆಗೆ ಕೃಷ್ಣಮಠಕ್ಕೂ ಹೋಗಲೇಬೇಕಾಗಿದೆ.

ಆದರೆ ಕೃಷ್ಣಮಠಕ್ಕೆ ಹೋಗದಿರಲು ತೀರ್ಮಾನಿಸಿರುವ ಸಿಎಂ ಅವರನ್ನು ಮಠಕ್ಕೆ ಬರುವಂತೆ ಉಸ್ತುವಾರಿ ಸಚಿವರು, ಸ್ಥಳೀಯ ನಾಯಕರು ಒತ್ತಾಯಿಸಿದ್ದಾರೆ. ಕುರುಬ ಸಮುದಾಯದ ಅಸಮಾಧಾನದ ಭೀತಿಯಿಂದ ಸಿಎಂ ಉಡುಪಿಗೆ ತೆರಳಲು ನಿರಾಕರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉಡುಪಿಯ ಕೃಷ್ಣಮಠದಲ್ಲಿ ಒಂದೂವರೆ ದಶಕದ ಹಿಂದೆ ನಡೆದ ಕನಕಗೋಪುರ ವಿವಾದ ಬಳಿ ಸಿಎಂ ಕೃಷ್ಣ ಮಠಕ್ಕೆ ಭೇಟಿ ನೀಡಿರಲಿಲ್ಲ. ಕನಕನ ಕಿಂಡಿ ಮೇಲಿನ ಗೋಪುರ ಕೆಡವಿರುವ ವಿಚಾರದಲ್ಲಿ ಸಿದ್ದರಾಮಯ್ಯ, ಕುರುಬ ಸಮುದಾಯದ ಪ್ರತಿನಿಧಿಯಾಗಿ ಹೋರಾಟ ಮಾಡಿದ್ದರು. ಅಲ್ಲದೆ ಇದಾದ ಬಳಿಕ ಸಿಎಂ ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ.

ಮತ್ತೊಂದು ಕುತೂಹಲಕಾರಿ ವಿಷಯ ಅಂದರೆ, ಸಿದ್ದರಾಮಯ್ಯನವರು ಚಿಕ್ಕವರಾಗಿದ್ದಾಗ ಮಠಕ್ಕೆ ಭೇಟಿ ನೀಡಿದ್ದಾಗ, ಪ್ರಸಾದವನ್ನು ಎಸೆದು ಅವಮಾನ ಮಾಡಿದ್ದರಂತೆ. ಈ ಕಾರಣಕ್ಕೆ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಕಾಲಿಟ್ಟಿಲ್ಲ ಎನ್ನಲಾಗುತ್ತಿದೆ.

ಏನೇ ಆದ್ರೂ ಸಿದ್ದರಾಮಯ್ಯನವರನ್ನು ಮಠಕ್ಕೆ ಕರೆಸೋದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸವಾಲಾಗಿದೆ. ಮಠಕ್ಕೆ ಭೇಟಿ ನೀಡದೆ ಪ್ರತಿಷ್ಟೆ ಕಾಯ್ದುಕೊಳ್ಳೋದು ಸಿದ್ದರಾಮಯ್ಯನವರಿಗೂ ಸವಾಲಾಗಿದೆ.