ಲೆಕ್ಕ ಕೇಳಬೇಕಾದವರು ಶೆಟ್ಟರ್, ಈಶ್ವರಪ್ಪ; ಶಾ ಯಾರು?

First Published 1, Mar 2018, 3:03 PM IST
CM Siddaramaiah Hits Out At Amit Shah
Highlights

ನನ್ನಲ್ಲಿ ಲೆಕ್ಕ ಕೇಳಲು ಅಮಿತ್ ಶಾ ಯಾರು? ಈಗಾಗಲೇ ರಾಜ್ಯದ ಜನತೆಗೆ ಲೆಕ್ಕ ಕೊಟ್ಟಿದ್ದು ಯಾವುದೇ ಕಾರಣಕ್ಕೂ ಶಾಗೆ ಲೆಕ್ಕ ಕೊಡಲಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ನನ್ನಲ್ಲಿ ಲೆಕ್ಕ ಕೇಳಲು ಅಮಿತ್ ಶಾ ಯಾರು? ಈಗಾಗಲೇ ರಾಜ್ಯದ ಜನತೆಗೆ ಲೆಕ್ಕ ಕೊಟ್ಟಿದ್ದು ಯಾವುದೇ ಕಾರಣಕ್ಕೂ ಶಾಗೆ ಲೆಕ್ಕ ಕೊಡಲಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಲೆಕ್ಕ ಕೇಳಬೇಕಾದವರು ಪ್ರತಿಪಕ್ಷ ನಾಯಕರಾಗಿರುವ ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ. ಅವರು ಕೇಳಿದರೆ ಲೆಕ್ಕ ಕೊಡುತ್ತೇನೆ ಎನ್ನುವುದು ಗೊತ್ತಾಗಿ ಬೇರೆಯವರಿಂದ ಲೆಕ್ಕ ಕೇಳಲು ಹಚ್ಚಿದ್ದಾರೆ.

ಯಾವ ಲೆಕ್ಕ ಯಾರು ಕೇಳಬೇಕು ಎನ್ನುವ ಜ್ಞಾನ, ಕಾನೂನು ಅರಿವಾಗಲಿ ಇಲ್ಲದೆ ಬರೀ ಸುಳ್ಳು ಹೇಳುತ್ತಾ ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಕಿಡಿಕಾರಿದರು.

loader