ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿಎಂ ‌ಸಿದ್ದರಾಮಯ್ಯಗೆ ನ್ಯಾ. ಕೆಂಪಣ್ಣ ಆಯೋಗವು ಕ್ಲೀನ್ ಚಿಟ್ ನೀಡಿದೆ ಎಮದು ಹೇಳಲಾಗಿದೆ. 5 ವಿಷಯಗಳ ಬಗ್ಗೆ ತನಿಖೆ ನಡೆಸಿರುವ ಕೆಂಪಣ್ಣ ಆಯೋಗ, ಅರ್ಕಾವತಿ ಲೇಔಟ್​ ರಿಡೂನಲ್ಲಿ ​ ಸಿಎಂ ಸಿದ್ದರಾಮಯ್ಯ ತಪ್ಪೆಸಗಿಲ್ಲ, ಕೆಳ ಹಂತದ ಅಧಿಕಾರಿಗಳಿಂದಷ್ಟೇ ತಪ್ಪಾಗಿದೆ ಎಂದು ಉಲ್ಲೇಖಿಸಿವೆ ಎಂದು ಉನ್ನತ ಮೂಲಗಳು ಸುವರ್ಣ ನ್ಯೂಸ್’ಗೆ ತಿಳಿಸಿವೆ.

ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿಎಂ ‌ಸಿದ್ದರಾಮಯ್ಯಗೆ ನ್ಯಾ. ಕೆಂಪಣ್ಣ ಆಯೋಗವು ಕ್ಲೀನ್ ಚಿಟ್ ನೀಡಿದೆ ಎಂದು ಹೇಳಲಾಗಿದೆ.

5 ವಿಷಯಗಳ ಬಗ್ಗೆ ತನಿಖೆ ನಡೆಸಿರುವ ಕೆಂಪಣ್ಣ ಆಯೋಗ, ಅರ್ಕಾವತಿ ಲೇಔಟ್​ ಡಿನೋಟಿಫಿಕೇಶ ಸಿಎಂ ಸಿದ್ದರಾಮಯ್ಯ ತಪ್ಪೆಸಗಿಲ್ಲ, ಕೆಳ ಹಂತದ ಅಧಿಕಾರಿಗಳಿಂದಷ್ಟೇ ತಪ್ಪಾಗಿದೆ ಎಂದು ಉಲ್ಲೇಖಿಸಿವೆ ಎಂದು ಉನ್ನತ ಮೂಲಗಳು ಸುವರ್ಣ ನ್ಯೂಸ್’ಗೆ ತಿಳಿಸಿವೆ.

ಸಚಿವ ಸಂಪುಟದ ಮುಂದೆ ಬರಲಿರುವ ಕೆಂಪಣ್ಣ ಆಯೋಗದ ವರದಿಯನ್ನು ಪುರಸ್ಕರಿಸುವುದು ಅಥವಾ ತಿರಸ್ಕರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ.

ಆಯೋಗದ ವರದಿಯು ಸರ್ಕಾರಕ್ಕೆ ಪೂರಕವಾಗಿದ್ದರೆ ವರದಿ ಒಪ್ಪಿಕೊಳ್ಳಬಹುದು ಹಾಗೂ ಮುಂದಿನ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ.