ವಿಧಾನಸಭೆ ಚುನಾವಣೆ ಒಂದೂವರೆ ವರ್ಷ ಇರುವಾಗ ಸಿಎಂ ಸಿದ್ದರಾಮಯ್ಯ ಚುನಾವಣೆ ಎದುರಿಸಲು ಮೋದಿ ಮಾದರಿ ಅನುಸರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಸೋಷಿಯಲ್ ಮಿಡಿಯಾ ಬಳಸಿಕೊಳ್ಳಲು ಮುಂದಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ಸಾಮಾಜಿಕ ಮಾಧ್ಯಗಳ ಮೂಲಕ ತಲುಪಿಸಿ, ಚುನಾವಣೆಗೆ ಲಾಭ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಇಂದು ವಾರ್ತಾ ಇಲಾಖೆಯಲ್ಲಿ ಅದಕ್ಕಾಗಿ ವಿಶೇಷ ವಿಭಾಗಕ್ಕೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು(ನ.18): ವಿಧಾನಸಭೆ ಚುನಾವಣೆ ಒಂದೂವರೆ ವರ್ಷ ಇರುವಾಗ ಸಿಎಂ ಸಿದ್ದರಾಮಯ್ಯ ಚುನಾವಣೆ ಎದುರಿಸಲು ಮೋದಿ ಮಾದರಿ ಅನುಸರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಸೋಷಿಯಲ್ ಮಿಡಿಯಾ ಬಳಸಿಕೊಳ್ಳಲು ಮುಂದಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ಸಾಮಾಜಿಕ ಮಾಧ್ಯಗಳ ಮೂಲಕ ತಲುಪಿಸಿ, ಚುನಾವಣೆಗೆ ಲಾಭ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಇಂದು ವಾರ್ತಾ ಇಲಾಖೆಯಲ್ಲಿ ಅದಕ್ಕಾಗಿ ವಿಶೇಷ ವಿಭಾಗಕ್ಕೆ ಚಾಲನೆ ನೀಡಲಿದ್ದಾರೆ.
ಸೋಷಿಯಲ್ ಮೀಡಿಯಾವನ್ನು ಎಷ್ಟರಮಟ್ಟಿಗೆ ಸಕಾರಾತ್ಮಕವಾಗಿ ಬಳಸಬಹುದು. ಆ ಮೂಲಕ ಜನರನ್ನು ಹೇಗೆ ತಲುಪಬಹುದು ಎನ್ನುವುದಕ್ಕೆ ಪ್ರಧಾನಿ ಮೋದಿ ಪ್ರತ್ಯಕ್ಷ ಸಾಕ್ಷಿ. ಲೋಕಸಭೆ ಚುನಾವಣೆಯಲ್ಲಿ ಮೋದಿ ಸೋಷಿಯಲ್ ಮೀಡಿಯಾ ಮೂಲಕ ದೇಶದ ಯುವ ಜನತೆಯನ್ನು ಸೆಳೆದು ಕೇಂದ್ರದಲ್ಲಿ ಅಧಿಕಾರ ಹಿಡಿದರು. ಇದೀಗ ರಾಜ್ಯದ ಸಿಎಂ ಸಿದ್ದರಾಮಯ್ಯ ಕೂಡ ಇದೇ ಮಾರ್ಗ ಅನುಸರಿಲು ಹೊರಟಿದ್ದಾರೆ. ಮುಂದಿನ ಚುನಾವಣೆ ಮೋದಿ ತಂತ್ರ ಬಳಸಲು ಮುಂದಾಗಿದ್ದಾರೆ.
ಈಗಾಗಲೇ ಫೇಸ್'ಬುಕ್ ಪೇಜ್ ಓಪನ್ ಮಾಡಿರುವ ಸಿಎಂ ಸಿದ್ದರಾಮಯ್ಯ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇದರ ಜೊತೆಗೆ ಟ್ವಿಟ್ಟರ್, ಯು ಟ್ಯೂಬ್'ಗಳ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಿಸಿ, ಅದನ್ನೇ ಮುಂದಿನ ವಿಧಾನಸಭಾ ಚುನಾವಣೆಗೆ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.
ಸಾಮಾಝಿಕ ಮಾಧ್ಯಮದ ವಿಶೇಷ ವಿಭಾಗವನ್ನು ನೋಡಿಕೊಳ್ಳಲು ಆಂಧ್ರ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಿದ್ದು, ವಾರ್ತಾ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆಯಲಿದೆ. ವಿಶೇಷ ವಿಭಾಗವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.
