ನಮ್ಮ ಸರ್ಕಾರದ ವಿರುದ್ಧ ದಾಖಲೆಗಳಿದ್ದರೆ ಬಹಿರಂಗಗೊಳಿಸಲಿ; ಮೋದಿಗೆ ಸಿದ್ದು ಸವಾಲು

CM Siddaramaiah Challenges Narendra Modi
Highlights

ಪ್ರಧಾನಿ ಮೋದಿ ದೇಶವನ್ನು ಚೌಕಿದಾರನಾಗಿ ಕಾಯುತ್ತೇನೆ ಎಂದಿದ್ದರು.  ಆದರೆ ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಹೇಗೆ ದೇಶ ಬಿಟ್ರು?  ದೇಶದ  ಕಾವಲುಗಾರನಾಗಿ ಮೋದಿ ಕಾದಿದ್ದರೆ  ದೇಶ ಬಿಟ್ಟು ಹೇಗೆ ಹೋಗುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ರಾಯಚೂರು (ಫೆ. 27):  ಪ್ರಧಾನಿ ಮೋದಿ ದೇಶವನ್ನು ಚೌಕಿದಾರನಾಗಿ ಕಾಯುತ್ತೇನೆ ಎಂದಿದ್ದರು.  ಆದರೆ ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಹೇಗೆ ದೇಶ ಬಿಟ್ರು?  ದೇಶದ  ಕಾವಲುಗಾರನಾಗಿ ಮೋದಿ ಕಾದಿದ್ದರೆ  ದೇಶ ಬಿಟ್ಟು ಹೇಗೆ ಹೋಗುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಬಿಜೆಪಿ ಅವಧಿಯಲ್ಲಿ ಸಾಲು ಸಾಲು ಸಚಿವರು ಜೈಲಿಗೆ ಹೋಗಿದ್ದರು.  ಆದರೂ ಪ್ರಧಾನಿ ನರೇಂದ್ರ ಮೋದಿ ನಮ್ಮನ್ನ ಭ್ರಷ್ಟ ಎನ್ನುತ್ತಾರೆ.  ನಮ್ಮ ಸರ್ಕಾರದ ಭ್ರಷ್ಟಾಚಾರದ ದಾಖಲೆಯಿದ್ದರೆ ಬಹಿರಂಗಪಡಿಸಲಿ ಎಂದು  ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಬಹಿರಂಗ ಸವಾಲು ಹಾಕಿದ್ದಾರೆ. 

ಒಬ್ಬರು ಮಣ್ಣಿನ ಮಗ, ಮತ್ತೊಬ್ಬರು ರೈತರ ಮಗ ಅಂತೆ.  ಹಾಗಾದ್ರೆ ನಾವ್ಯಾರ ಮಕ್ಕಳು ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.  ರೈತರು ಗೊಬ್ಬರ ಕೇಳಿದ್ರೆ ರೈತರ ಮಗ ಗೋಲಿಬಾರ್ ಮಾಡಿದ್ದರು ಎಂದು ಬಿಎಸ್’ವೈ  ವಿರುದ್ಧ ವಾಗ್ದಾಳಿ ನಡೆಸಿದರು. 


 

loader