ಇಂದಿನಿಂದ ತವರು ಜಿಲ್ಲೆಯಲ್ಲಿ ಸಿಎಂ ಪ್ರಚಾರ ಆರಂಭ; ಕೈ ಹಿಡಿಯುತ್ತಾಳಾ ’ಚಾಮುಂಡೇಶ್ವರಿ’?

CM Siddaramaiah Campaign By Mysuru Today
Highlights

ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಮತಯಾಚನೆ ಆರಂಭಿಸಿದ್ದಾರೆ.  ಇಂದಿನಿಂದ ಮತ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.  

ಮೈಸೂರು (ಮಾ. 29):  ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಮತಯಾಚನೆ ಆರಂಭಿಸಿದ್ದಾರೆ.  ಇಂದಿನಿಂದ ಮತ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.  

ಇಂದಿನಿಂದ ಐದು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ  ಮೈಸೂರು ಪ್ರವಾಸ ಕೈಗೊಂಡಿದ್ದಾರೆ.  ಏಪ್ರಿಲ್  2 ರಂದು ರಾಜಧಾನಿಗೆ ವಾಪಸ್ಸಾಗಲಿದ್ದಾರೆ.   ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮೂಡ್ ಬದಲಿಸಲು ತಂತ್ರ ಹೆಣೆದಿದ್ದಾರೆ.   ಮೊದಲಿಗೆ ರಮ್ಮನಹಳ್ಳಿಯಿಂದ ಪ್ರಚಾರ ಆರಂಭ ಮಾಡಲಿದ್ದಾರೆ.  ಕಾಳಸಿದ್ದನ ಹುಂಡಿ, ಹಂಚ್ಯ, ಗಳಗರ ಹುಂಡಿ, ಮೆಲ್ಲಹಳ್ಳಿ, ಉದಬೂರು ಗ್ರಾಮಗಳಿಗೆ ಮುಖ್ಯಮಂತ್ರಿ ಭೇಟಿ ನೀಡಲಿದ್ದಾರೆ.  ಈಗಾಗಲೇ ರಾಜ್ಯಾದ್ಯಂತ ಸಾಧನಾ ಸಮಾವೇಶ, ಜನಾರ್ಶೀವಾದ ಯಾತ್ರೆ ಹೆಸರಿನಲ್ಲಿ ಎರಡು ಸುತ್ತಿನ ಪ್ರವಾಸ ಮುಗಿಸಿರುವ ಸಿದ್ದರಾಮಯ್ಯ ಇಂದಿನಿಂದ ತವರು ಜಿಲ್ಲೆ ಮೈಸೂರಿನಲ್ಲಿ ಪ್ರಚಾರ ಆರಂಭಿಸಲಿದ್ದಾರೆ.  ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ತಾವು ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರದಿಂದ ಮತಯಾಚನೆ ಆರಂಭಿಸಲಿದ್ದಾರೆ. 
 

loader