ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ಎನ್ನುತ್ತಾ ಹೊರಟಿರುವ ಸಿಎಂ ಸಿದ್ದರಾಮಯ್ಯ, ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಮುಖಂಡರನ್ನು ಅಣಿಗೊಳಿಸುತ್ತಿದ್ದಾರೆ. ಮನಸ್ತಾಪದಿಂದ ದೂರವಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಒಂದು ಮಾಡುವ ಪ್ರಯತ್ನವನ್ನ ಸಿದ್ದರಾಮಯ್ಯ ಮಾಡಿದ್ದಾರೆ.

ಬೆಂಗಳೂರು(ಅ.06): ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ಎನ್ನುತ್ತಾ ಹೊರಟಿರುವ ಸಿಎಂ ಸಿದ್ದರಾಮಯ್ಯ, ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಮುಖಂಡರನ್ನು ಅಣಿಗೊಳಿಸುತ್ತಿದ್ದಾರೆ. ಮನಸ್ತಾಪದಿಂದ ದೂರವಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಒಂದು ಮಾಡುವ ಪ್ರಯತ್ನವನ್ನ ಸಿದ್ದರಾಮಯ್ಯ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಯಕ ಸಮುದಾಯದ ಪ್ರಬಲ ಮುಖಂಡರಾದ ಜಾರಕಿಹೊಳಿ ಸಹೋದರರನ್ನ ವಾಲ್ಮೀಕಿ ಜಯಂತಿಯಂದೇ ಕೈ ಕುಲುಕಿಸಿದ್ದಾರೆ. ವಾಲ್ಮೀಕಿ ಜಯಂತೋತ್ಸವದ ನಿಮಿತ್ತ ನಿನ್ನೆ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಹಾಗೂ ವಾಲ್ಮೀಕಿ ತಪೋವನ ಉದ್ಘಾಟನಾ ಸಮಯದಲ್ಲೇ ಇಬ್ಬರು ಮುಖಂಡರ ಮನಸ್ತಾಪ ಶಮನಕ್ಕೆ ಬ್ರೇಕ್ ಹಾಕುವ ಯತ್ನವನ್ನ ಸಿಎಂ ಮಾಡಿದ್ದಾರೆ.

ವಾಲ್ಮೀಕಿ ಪುತ್ಥಳಿ ಅನಾವರಣ ಮಾಡಿದ ತಕ್ಷಣವೇ ಪಕ್ಕದಲ್ಲಿದ್ದ ಸತೀಶ ಜಾರಕಿಹೊಳಿ ಕೈ ಹಿಡಿದು, ಹಿಂದೆ ನಿಂತಿದ್ದ ಸಚಿವ ರಮೇಶ ಜಾರಕಿಹೊಳಿಯನ್ನು ಕರೆದು ಇಬ್ಬರ ಕೈಯನ್ನು ಕುಲುಕಿಸಿದರು. ಇನ್ನೂ ಮನಸ್ತಾಪ ಬೇಡ. ಒಗ್ಗಟ್ಟಿನಿಂದ ಕೆಲಸ ಮಾಡಿ ಅಂತಾ ಸಲಹೆ ನೀಡಿದರು. ರಮೇಶ್ ಜಾರಕಿಹೊಳಿ ನಗುತ್ತಾ ನಿಂತರೆ, ಸತೀಶ್ ಜಾರಕಿಹೊಳಿ ಗಂಭೀರವಾಗೇ ಇದ್ದರು.