ತಾಲೂಕಿನ ಅಸುಂಡಿಯಲ್ಲಿ ಮಂಗಳವಾರ ಕೆರೆ ತುಂಬಿಸುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಭಾಷಣ ಮಾಡುತ್ತಿದ್ದಾಗ ಕೆಲವರು ವೇದಿಕೆ ಎದುರು ಬಂದು ಬ್ಯಾಡಗಿ ಕ್ಷೇತ್ರದಿಂದ ಎಸ್‌.ಆರ್‌. ಪಾಟೀಲರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಪ್ರಸಂಗ ನಡೆಯಿತು. ಈ ವೇಳೆ ಒಂದು ಹಂತದಲ್ಲಿ ಆಕ್ರೋಶಗೊಂಡ ಸಿದ್ದರಾಮಯ್ಯ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.

ಹಾವೇರಿ : ತಾಲೂಕಿನ ಅಸುಂಡಿಯಲ್ಲಿ ಮಂಗಳವಾರ ಕೆರೆ ತುಂಬಿಸುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಭಾಷಣ ಮಾಡುತ್ತಿದ್ದಾಗ ಕೆಲವರು ವೇದಿಕೆ ಎದುರು ಬಂದು ಬ್ಯಾಡಗಿ ಕ್ಷೇತ್ರದಿಂದ ಎಸ್‌.ಆರ್‌. ಪಾಟೀಲರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಪ್ರಸಂಗ ನಡೆಯಿತು. ಈ ವೇಳೆ ಒಂದು ಹಂತದಲ್ಲಿ ಆಕ್ರೋಶಗೊಂಡ ಸಿದ್ದರಾಮಯ್ಯ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.

ಸಿಎಂ ಭಾಷಣ ಆರಂಭಿಸುತ್ತಿದ್ದಂತೆ ಕೆಲವರು ವೇದಿಕೆ ಹತ್ತಿರವೇ ಬಂದು ಏರು ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು. ಈ ಬಾರಿ ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿ ಬದಲಾಗಬೇಕು. ಪಕ್ಷದ ಮುಖಂಡ ಎಸ್‌.ಆರ್‌. ಪಾಟೀಲ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು. ಆಗ ಗರಂ ಆದ ಸಿದ್ದರಾಮಯ್ಯ, ಇವರು ಎಸ್‌.ಆರ್‌. ಪಾಟೀಲ ಕಡೆಯವರಾ ? ಏ ಪಾಟೀಲ, ಏನಿದು? ಅವರು ಕಾಂಗ್ರೆಸಿಗರಾಗಿ ಹೀಗೆ ಮಾಡುತ್ತಿದ್ದಾರಾ? ಟಿಕೆಟ್‌ ಬಗ್ಗೆ ಹೇಳೋಕೆ ಇದು ಸರ್ಕಾರಿ ಕಾರ್ಯಕ್ರಮ. ಅಷ್ಟೂಗೊತ್ತಾಗಲ್ವಾ ಎಂದು ಅಸಮಾಧಾನ ಹೊರಹಾಕಿದರು. ಆಗ ಪೊಲೀಸರು ಬಂದು ಪಾಟೀಲರ ಅಭಿಮಾನಿಗಳನ್ನು ದೂರಕ್ಕೆ ಕಳುಹಿಸಿದರು.