ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್​​​ನಲ್ಲಿ ಹಸ್ತವ್ಯಸ್ಥ ಉಂಟಾಗಿದೆ. ಸಿಎಂ ನಿರ್ಧಾರಕ್ಕೆ ಕುದಿಯುತ್ತಿದ್ದಾರೆ ಮೂಲ ಕಾಂಗ್ರೆಸ್ಸಿಗರು. ಸಂಪುಟ ವಿಸ್ತರಣೆ ಮೂಲಕ ನಾ ಮಾಟೇ ಶಾಸನಂ ಅನ್ನೋದನ್ನ ಸಿಎಂ ಸಾಬೀತು ಮಾಡಿದ್ದಾರೆ. ಅಲ್ಲದೇ ಹೈಕಮಾಂಡ್​​'ಗೆ ಸೆಡ್ಡು ಹೊಡೆದ್ರಾ ಸಿದ್ದರಾಮಯ್ಯ ಅನ್ನೋ ಪ್ರಶ್ನೆ ಕಾಡ್ತಿದೆ.

ಬೆಂಗಳೂರು(ಸೆ.02): ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್​​​ನಲ್ಲಿ ಹಸ್ತವ್ಯಸ್ಥ ಉಂಟಾಗಿದೆ. ಸಿಎಂ ನಿರ್ಧಾರಕ್ಕೆ ಕುದಿಯುತ್ತಿದ್ದಾರೆ ಮೂಲ ಕಾಂಗ್ರೆಸ್ಸಿಗರು. ಸಂಪುಟ ವಿಸ್ತರಣೆ ಮೂಲಕ ನಾ ಮಾಟೇ ಶಾಸನಂ ಅನ್ನೋದನ್ನ ಸಿಎಂ ಸಾಬೀತು ಮಾಡಿದ್ದಾರೆ. ಅಲ್ಲದೇ ಹೈಕಮಾಂಡ್​​'ಗೆ ಸೆಡ್ಡು ಹೊಡೆದ್ರಾ ಸಿದ್ದರಾಮಯ್ಯ ಅನ್ನೋ ಪ್ರಶ್ನೆ ಕಾಡ್ತಿದೆ.

ಯಾಕಂದ್ರೆ ಹೈಕಮಾಂಡ್​​ ತೆಗೆದುಕೊಂಡಿದ್ದ ನಿರ್ಧಾರವನ್ನೇ ಸಿದ್ದರಾಮಯ್ಯ ಬದಲಿಸಿದ್ದಾರೆ. ತಮಗಿಷ್ಟ ಬಂದಂತೆ ಪಕ್ಷದ ನಿರ್ಧಾರ ಬದಲಿಸಿದ್ದಕ್ಕೆ ಮೂಲ ಕಾಂಗ್ರೆಸ್ಸಿಗರು ಗರಂ ಆಗಿದ್ದಾರೆ ಅಂತ ಹೇಳಲಾಗ್ತಿದೆ. ಸಂಪುಟ ವಿಸ್ತರಣೆಯಲ್ಲಿ ಸಿಎಂಗೆ ಹೈಕಮಾಂಡ್​ ಹೆಚ್ಚಿನ ಸ್ವಾತಂತ್ರ್ಯ ನೀಡಿತ್ತು. ಹೀಗಾಗಿ ಪಕ್ಷದಲ್ಲಿ ಇತರೆ ನಾಯಕರನ್ನು ದುರ್ಬಲಗೊಳಿಸಲು ಸಿಎಂ ಪ್ರಯತ್ನ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ತಮ್ಮ ಪುತ್ರ ಹಾಗೂ ಮಹದೇವಪ್ಪ ಪುತ್ರನ ರಾಜಕೀಯಕ್ಕೆ ಗೀತಾರನ್ನು ಮಂತ್ರಿಗಿರಿ ಮಾಡಿದ್ರಾ ಅನ್ನೂ ಪ್ರಶ್ನೆ ಕೂಡಾ ಕಾಡ್ತಿದೆ. ಮತ್ತೊಂದೆಡೆ ಗೃಹ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿದ್ದಾರೆ. ಹೈಕಮಾಂಡ್ ಮಾತಿಗೂ ಬೆಲೆಕೊಡದೆ ರಾಮಲಿಂಗಾರೆಡ್ಡಿಗೆ ಗೃಹ ಖಾತೆ ನೀಡಿದ್ದಾರೆ. ಡಿಕೆಶಿಗೆ ಇಂಧನ ಖಾತೆ ಜೊತೆ ಗೃಹಮಂತ್ರಿ ಸ್ಥಾನ ನೀಡಲು ಅಹ್ಮದ್​​ ಪಟೇಲ್ ಸಲಹೆ ಕೊಟ್ಟಿದ್ರು. ಅಹ್ಮದ್​ ಪಟೇಲ್​ ಸಲಹೆ ಪಕ್ಕಕ್ಕಿಟ್ಟು ರಾಮಲಿಂಗಾರೆಡ್ಡಿಗೆ ಗೃಹ ಖಾತೆ ನೀಡಿದ್ದಾರೆ.