ಬೆಂಗಳೂರು, ಮೈಸೂರು, ಹಾಸನ, ತುಮಕೂರು ಹಾಗೂ ಈ ಭಾಗಗಳಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 24 ಟಿಎಂಸಿ ನೀರಿನ ಅಗತ್ಯವಿದೆ. ಅಷ್ಟುನೀರನ್ನು ಉಳಿಸಿಕೊಂಡು, ಅದಕ್ಕಿಂತ ಹೆಚ್ಚಿನ ನೀರಿದ್ದರೆ ತಮಿಳನಾಡಿಗೆ ಹರಿಸಲಾಗುವುದು

ಬೆಂಗಳೂರು(ಅ.9): ಕುಡಿಯುವ ನೀರಿಗೆ ಕೊರತೆಯಾದರೆ ಯಾವ ಕೋರ್ಟ್‌ ಹೇಳಿದರೂ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿ, ಬೆಂಗಳೂರು, ಮೈಸೂರು, ಹಾಸನ, ತುಮಕೂರು ಹಾಗೂ ಈ ಭಾಗಗಳಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 24 ಟಿಎಂಸಿ ನೀರಿನ ಅಗತ್ಯವಿದೆ. ಅಷ್ಟುನೀರನ್ನು ಉಳಿಸಿಕೊಂಡು, ಅದಕ್ಕಿಂತ ಹೆಚ್ಚಿನ ನೀರಿದ್ದರೆ ತಮಿಳನಾಡಿಗೆ ಹರಿಸಲಾಗುವುದು. ಏಕೆಂದರೆ ಕುಡಿವ ನೀರು ಮನುಷ್ಯರಿಗೆ ಅತ್ಯಂತ ಅವಶ್ಯ. ಅದು ಅವರ ಮೂಲಭೂತ ಹಕ್ಕು ಸಹ ಎಂದರು.
ನಮಗೆ ಕುಡಿಯಲು ನೀರಿಲ್ಲದಿದ್ದರೆ ಯಾವುದೇ ಕೋರ್ಟ್‌ ಆದೇಶ ಮಾಡಿದರೂ ನೀರು ಬಿಡದಿರುವುದೇ ಸರ್ಕಾರದ ನಿಲುವಾಗಿರುತ್ತದೆ. ಈ ಹಿಂದೆ ಈ ರೀತಿಯ ನಿರ್ಧಾರವನ್ನು ಯಾವುದೇ ಸರ್ಕಾರವೂ ತೆಗೆದು ಕೊಂಡಿ ರಲಿಲ್ಲ. ಯಾರು ನಾಗರಿಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿದರು. 
ರಾಜ್ಯದಲ್ಲಿ 2ನೇ ವರ್ಷವೂ ಬರಗಾಲ ಮುಂದುವರಿ​ದಿ​ರು​ವು​ದು ಹಾಗೂ ಕಾವೇರಿ ಸಂಕಷ್ಟದಿಂದ ದಸರಾ​ವನ್ನು ವಿಜೃಂಭಣೆಯಿಂದ ಆಚರಿಸುವ ಬದಲು ಸಾಂಪ್ರದಾಯಿಕ​ವಾಗಿ ಆಚ​ರಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.