Asianet Suvarna News Asianet Suvarna News

ಸಿಎಂಗೆ ಸಾಕಾಯ್ತಾ ಜನತಾ ದರ್ಶನ : ಹಿಂಸೆ ಎಂದ ಹೆಚ್ಡಿಕೆ

  • ಆಡಳಿತಕ್ಕೆ ತೊಂದರೆಯಾಗುವ ಸಾಧ್ಯತೆ
  • ಬಹುತೇಕ ಸಮಸ್ಯೆಗಳು ಶುಲ್ಕದ ಕಾರಣಗಳಾಗಿರುತ್ತವೆ
CM's Janata Darshan turns into waiting ordeal

ಬೆಂಗಳೂರು[ಜೂ.13]: ಜನತಾ ದರ್ಶನದ ಮೂಲಕ ಸಾರ್ವಜನಿಕರನ್ನು ನೇರವಾಗಿ ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಬಗೆಹರಿಸುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಜನರಿಂದ ಮೆಚ್ಚುಗೆ ಗಳಿಸಿದ್ದರು.

ಈಗ ಇದು ಅವರಿಗೆ ಬೇಸರ ತಂದಿದೆಯೇ  ಇದು ಬೇರೆಯವರು ಹೇಳಿದ ಮಾತಲ್ಲ ಸ್ವತಃ ಅವರೇ ನುಡಿದ ಅಚ್ಚರಿಯ ಹೇಳಿಕೆ. ಜನತಾ ದರ್ಶನ ನನಗೆ ಹಿಂಸೆ.. ಬೆಳಗಿನಿಂದ ಸಂಜೆ ವರೆಗೂ ಇದನ್ನೇ ಮಾಡ್ತಾ ಕುಳಿತುಕೊಂಡರೆ ಆಡಳಿತ ನಡೆಸೋಕಾಗಲ್ಲ' ಎಂದಿದ್ದಾರೆ. 

ಹೀಗೆನ್ನಲು ಕಾರಣವೇನು ? 
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೀಗೆನ್ನಲು ಪ್ರಮುಖ ಕಾರಣವಿದೆ. ಜನತಾ ದರ್ಶನಕ್ಕೆ ಬರುವ ಜನರಲ್ಲಿ ಶೇ 80 ರಷ್ಟು ಜನ ಮಕ್ಕಳ ಶುಲ್ಕ ಕೇಳಿ ಬರ್ತಾರೆ. ಅದಕ್ಕೆ ಜಿಲ್ಲಾಧಿಕಾರಿಗಳು ದುಡ್ಡು ಕೊಡೋಕಾಗಲ್ಲ. ನಾನು ಬಜೆಟ್ ಮಂಡಿಸಿ ಕಾರ್ಯಕ್ರಮ ಕೊಡಬೇಕು ಎನ್ನುತ್ತಾರೆ.

ಅಬಕಾರಿ, ಇಂಧನ ಸೇರಿದಂತೆ ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳಿಗೆ ಆಯಾ ಇಲಾಖೆಯ ಸಮಸ್ಯೆಗಳನ್ನು ನಿಭಾಯಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. 15 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಈಗಾಗಲೇ ರಾಜ್ಯದ ರೈತರಿಗೆ ಭರವಸೆ ನೀಡಲಾಗಿದೆ.

ಇಷ್ಟೆಲ್ಲ ಜವಾಬ್ದಾರಿಗಳ ನಡುವೆ ದಿನವಿಡಿ ಜನರನ್ನು ಭೇಟಿ ಮಾಡುತ್ತಾ ಕುಳಿತರೆ ಆಡಳಿತ ನಿರ್ವಹಣೆ ಕಷ್ಟವಾಗುತ್ತದೆ ಎಂಬುದು ಸಿಎಂ ಲೆಕ್ಕಾಚಾರವಾಗಿದೆ. ಜನತಾ ದರ್ಶನವನ್ನು ಸೀಮಿತ ದಿನಗಳಲ್ಲಿ ಕೈಗೊಳ್ಳುವುದು ಅಥವಾ ಸಾರ್ವಜನಿಕರ ಭೇಟಿಗೆ ಆಡಳಿತಕ್ಕೆ ಕುಂದುಂಟಾಗದಂತೆ ಪರ್ಯಾಯ ಯೋಜನೆಗಳನ್ನು ರೂಪಿಸುವ ಸಾಧ್ಯತೆಯಿದೆ. ಸದ್ಯ ಆಯವ್ಯವ ಮಂಡನೆಯವರೆಗೂ ಜನತಾ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ       

 

 

 

Follow Us:
Download App:
  • android
  • ios