ಶುಕ್ರವಾರ ಗೋವಾಗೆ ಮರಳಲಿರುವ ಸಿಎಂ ಪರಿಕ್ಕರ್

First Published 13, Jun 2018, 8:07 PM IST
CM Parrikar to return to Goa on June 15
Highlights

ಶುಕ್ರವಾರ ತಾಯ್ನಾಡಿಗೆ ಮರಳಲಿರುವ ಗೋವಾ ಸಿಎಂ

ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಮನೋಹರ್ ಪರಿಕ್ಕರ್

ಜೂನ್ 15 ರಂದು ಪಣಜಿಗೆ ಬರಲಿರುವ ಸಿಎಂ

ಮುಖ್ಯಮಂತ್ರಿ ಕಾರ್ಯಾಲಯದಿಂದ ಮಾಹಿತಿ 

ಪಣಜಿ(ಜೂ.13): ಅನಾರೋಗ್ಯದ ಕಾರಣ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಇದೇ ಶುಕ್ರವಾರ ವಾಪಾಸ್ ಆಗಲಿದ್ದಾರೆ. ಈ ಕುರಿತು ಗೋವಾ ಮುಖ್ಯಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದ್ದು, ಜೂ.15ರಂದು ಪರಿಕ್ಕರ್ ಗೋವಾಗೆ ಮರಳಲಿದ್ದಾರೆ ಎಂದು ತಿಳಿಸಿದೆ.

ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಪರಿಕ್ಕರ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ತಿಂಗಳು ವಿಡಿಯೋವೊಂದನ್ನು ಕಳುಹಿಸಿದ ಪರಿಕ್ಕರ್, ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಶೀಘ್ರದಲ್ಲೇ ತಾಯ್ನಾಡಿಗೆ ಮರಳಿ ಬರುವುದಾಗಿ ತಿಳಿಸಿದ್ದರು.

ಪರಿಕ್ಕರ್ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳುವ ಮುಂಚೆ ಮುಂಬೈನಲ್ಲಿರುವ ಲೀಲಾವತಿ ಆಸ್ಪತ್ರೆಗೆ ಫೆಬ್ರವರಿ 15 ರಂದು ದಾಖಲಾಗಿದ್ದರು. ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದರು.

loader