ಸಿಎಂ ಎಸ್ ಜೆ ಸಿಐಟಿ ಕಾಲೇಜು ಆವರಣದಲ್ಲಿ ಹೆಲಿಪ್ಯಾಡ್ ಮೂಲಕ ಆಗಮಿಸಿದ್ದರು.
ಚಿಕ್ಕಬಳ್ಳಾಪುರ(ಅ.30): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚೆ ಹರಿದ ಘಟನೆ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಈರೇದೇವರು, ಬೀರೆ ದೇವರ ದೇವಸ್ಥಾನಗಳ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಎಸ್ ಜೆ ಸಿಐಟಿ ಕಾಲೇಜು ಆವರಣದಲ್ಲಿ ಹೆಲಿಪ್ಯಾಡ್ ಮೂಲಕ ಆಗಮಿಸಿದ್ದರು. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಬಳಿಕ ಅಲ್ಲಿ ಹಾಕಿದ್ದ ಬ್ಯಾರಿಕೇಡ್'ಗಳಿಗೆ ಪಂಚೆ ಸಿಕ್ಕಿ ಹರಿದು ಹೋಯಿತು. ಬಳಿಕ ಆದಿಚುಂಚನಗಿರಿ ಮಠದಲ್ಲಿ ಹೊಸ ಪಂಚೆ ಹಾಕಿಕೊಂಡು ಕಾರ್ಯಕ್ರಮಕ್ಕೆ ತೆರಳಿದರು.
