Asianet Suvarna News Asianet Suvarna News

ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಿಎಂ ಸಭೆ: ಸಭೆ ವಿಫಲವಾದರೆ ಮತ್ತೆ ಬೀದಿಗಿಳಿಯುತ್ತಾರೆ ಕಾರ್ಯರ್ತೆಯರು

ಭಾರೀ ಸದ್ದು ಮಾಡಿದ್ದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಮತ್ತೆ ಶುರುವಾಗಲಿದೆಯಾ? ಇವತ್ತಿನ  ಸಿಎಂ ಜೊತೆಗಿನ  ಸಭೆ ವಿಫಲವಾದರೆ ನಾವು ಮತ್ತೆ ಬೀದಿಗೆ ಬರುತ್ತೇವೆ ಎನ್ನುವ ಸೂಚನೆಯನ್ನು  ಅಂಗನವಾಡಿ ಕಾರ್ಯಕರ್ತೆಯರು ನೀಡಿದ್ದಾರೆ.

CM Meeting With Anganavadi Activists

ಬೆಂಗಳೂರು(ಎ.10): ಭಾರೀ ಸದ್ದು ಮಾಡಿದ್ದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಮತ್ತೆ ಶುರುವಾಗಲಿದೆಯಾ? ಇವತ್ತಿನ  ಸಿಎಂ ಜೊತೆಗಿನ  ಸಭೆ ವಿಫಲವಾದರೆ ನಾವು ಮತ್ತೆ ಬೀದಿಗೆ ಬರುತ್ತೇವೆ ಎನ್ನುವ ಸೂಚನೆಯನ್ನು  ಅಂಗನವಾಡಿ ಕಾರ್ಯಕರ್ತೆಯರು ನೀಡಿದ್ದಾರೆ.

ವಿವಿಧ ಬೇಡಿಕೆಗಳ  ಈಡೇರಿಕೆಗಾಗಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ದೇಶದಾದ್ಯಂತ ಗಮನ ಸೆಳೆದಿದ್ದರು . ಉಪ ಚುನಾವಣೆ ಮುಗಿಯುತ್ತಿದ್ದಂತೆ ಬೇಡಿಕೆ ಈಡೇರಿಸುವ  ಭರವಸೆಯನ್ನು  ಸಿಎಂ ಸಿದ್ದರಾಮಯ್ಯ ನೀಡಿದ್ದರು . ಈಗ  ಚುನಾವಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ  ಇವತ್ತು  ವಿಧಾನಸೌಧದಲ್ಲಿ  ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಸಂಬಂಧ ಸಿಎಂ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಿ ಐ ಟಿ ಯು ಮುಖ್ಯಸ್ಥೆ ವರಲಕ್ಷ್ಮಿ ಸೇರಿದಂತೆ ಕೆಲ ಸಂಘಟನೆಗಳು ಭಾಗಿಯಾಗಲಿವೆ.

ಇಂದು ಬೆಳಗ್ಗೆ 10 ಗಂಟೆಗೆ ವಿಧಾನ ಸೌಧದಲ್ಲಿ  ಸಭೆ ನಡೆಯಲಿದೆ. ಗುಂಡ್ಲು ಪೇಟೆ ಮತ್ತು ನಂಜನಗೂಡು ಉಪಚುನಾವಣೆ ಹಿನ್ನಲೆಯಲ್ಲಿ ಸಭೆ ಮುಂದುಡಲಾಗಿತ್ತು. ಹೀಗಾಗಿ ಎಲ್ಲರ ಚಿತ್ತ  ಇಂದಿನ ಸಭೆಯ ಮೇಲೆ ನೆಟ್ಟಿದೆ. ಒಂದು ವೇಳೆ ಸಭೆ ವಿಫಲವಾದ್ರೆ ನಾವು ಮತ್ತೆ ಬೀದಿಗಿಳಯಬೇಕಾಗತ್ತೆ. ಈ ಸಂಬಂಧ ಈಗಾಗಲೇ ಧರಣಿ ನಡೆಸಲು ಪೊಲೀಸರ ಅನುಮತಿ ಕೇಳಿದ್ದಾಗಿ CITU ಮುಖ್ಯಸ್ಥೆ ವರಲಕ್ಷೀ ಸುವರ್ಣ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.

ಒಂದುವಾರಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ದ  ಕಾರ್ಯಕರ್ತೆಯರು , ಕನಿಷ್ಠ ವೇತನ ಹೆಚ್ಚಳ, ಮತ್ತು ಕೆಲಸದ ಸಮಯ ಕಡಿತಗೊಳಿಸುವಂತೆ ಆಗ್ರಹಿಸಿದ್ದರು. ಆದರೂ  ವೇತನ ಹೆಚ್ಚಳದ ಬಗ್ಗೆ ಅಂತಿಮ ತಿರ್ಮಾನವನ್ನ ಸರ್ಕಾರ ತೆಗೆದುಕೊಂಡಿರಲಿಲ್ಲ.  ಹೀಗಾಗಿ ಇಂದು ಮುಖ್ಯಮಂತ್ರಿ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಆದ್ರೆ ಸರ್ಕಾರ ಈವರೆಗೂ ಯಾವುದೇ ಚಿಂತನೆ ನಡೆಸಿಲ್ಲ. ಇಂದಿನ ಸಭೆ ಬಳಿಕ ವೇತನ ಹೆಚ್ಚಳವೋ ಅಥವಾ ಮತ್ತೆ ಧರಣಿಯೋ ತಿಳಿಯಲಿದೆ.

Follow Us:
Download App:
  • android
  • ios