‘ನೀವು ಸರ್ಕಾರಕ್ಕಿಂತ ದೊಡ್ಡವರಾ..'?: ಅಬಕಾರಿ ಆಯುಕ್ತರ ಮೇಲೆ ಸಿಎಂ ಗರಂ!

CM Kumarswamy angry on Excise Commissioner
Highlights

ಅಬಕಾರಿ ಆಯುಕ್ತ  ಮುನೀಶ್ ಮೌನೇಶ್ ಮೌದ್ಗಿಲ್ ಮೇಲೆ ಸಿಎಂ ಗರಂ

ನೀವು ಸರ್ಕಾರಕ್ಕಿಂತ ದೊಡ್ಡವರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ

ಮಹಿಳಾ ಅಬಕಾರಿ ಮರು ವರ್ಗಾವಣೆಗೆ ನಿರ್ಲಕ್ಷ್ಯ ತೋರಿದ ಆರೋಪ

ಸೋಮವಾರದೊಳಗೆ ಮರು ವರ್ಗಾವಣೆ ಮಾಡದಿದ್ದರೆ ಅಮಾನತು

ಬೆಂಗಳೂರು(ಜೂ.8): ಅಬಕಾರಿ ಆಯುಕ್ತ ಮುನೀಶ್ ಮೌದ್ಗಿಲ್ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಟ್ಟಾದ ಪ್ರಸಂಗ ಜರುಗಿದೆ. ಚುನಾವಣೆಗೆ ಮೊದಲು ವಿವಿಧ ಸ್ಥಳಗಳಿಗೆ ನಿಯೋಜನೆಗೊಂಡಿದ್ದ ಅಬಕಾರಿ ಇನ್ಸಪೆಕ್ಟರ್‌ಗಳನ್ನು ಮತ್ತೆ ಮೂಲ ಸ್ಥಳಗಳಿಗೆ ವಾಪಸ್ ವರ್ಗಾಯಿಸುವಂತೆ ಕುಮಾರಸ್ವಾಮಿ ಆದೇಶಿಸಿದ್ದರು.

ಆದರರ್ ಮುನೀಶ್ ಮೌದ್ಗಿಲ್ ಸಿಎಂ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಮಹಿಳಾ ಅಬಕಾರಿ ಇನ್ಸಪೆಕ್ಟರ್‌ಗಳು ಸಿಎಂ ಮುಂದೆ ಅಳಲು ತೋಡಿಕೊಂಡ ಪರಿಣಮ, ಸಿಟ್ಟಾದ ಸಿಎಂ ಕುಮಾರಸ್ವಾಮಿ ಮೌನೇಶ್ ಅವರನ್ನು ಅಮಾನತು ಮಾಡುವಂತೆ ಆದೇಶ ನೀಡಿದರು.

ಮುನೀಶ್ ಮುದ್ಗಿಲ್ ಸರ್ಕಾರಕ್ಕಿಂತ ದೊಡ್ಡವರಾ ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದ ಕುಮಾರಸ್ವಾಮಿ, ಸೋಮವಾರದೊಳಗಾಗಿ ಎಲ್ಲ ಮಹಿಳಾ ಅಬಕಾರಿ ಇನ್ಸಪೆಕ್ಟರ್‌ಗಳ ಮರು ವರ್ಗಾವಣೆ ಆದೇಶ ಆಗಬೇಕು.ಇಲ್ಲವಾದರೆ ಅಬಕಾರಿ ಆಯುಕ್ತರನ್ನು ಅಮಾನತು ಮಾಡಲಾಗುವುದು ಎಂದು ಗುಡುಗಿದರು.

ಕುಮಾರಸ್ವಾಮಿ ಆಕ್ರೋಶವನ್ನು ಮನಗಂಡ ಸಿಎಂ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ತಕ್ಷಣವೇ ಮರು ವರ್ಗಾವಣೆ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.

loader