ಕುಮಾರಸ್ವಾಮಿಯಿಂದ ರಾಜ್ಯದ ಮಠಗಳಿಗೆ ಬಂಪರ್ ಕೊಡುಗೆ!

CM Kumarswamy allocate 25 crore grant for Religious Centers
Highlights

ರಾಜ್ಯದ ಮಠಗಳಿಗೆ ಬಂಪರ್​ ಕೊಡುಗೆ

ಮಠ, ಸಂಘ-ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ಅನುದಾನ

ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಪರಿಗಣಿಸಿ ಅನುದಾನ

ಬೆಂಗಳೂರು(ಜು.5): ಸಿಎಂ ಕುಮಾರಸ್ವಾಮಿ ಇಂದು ಮಂಡಿಸಿರುವ ಬಜೆಟ್‌ನಲ್ಲಿ ಮಠ, ಸಂಘ-ಸಂಸ್ಥೆಗಳಿಗೆ ತಲಾ 25 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ, ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಠಗಳಿಗೆ ಭಾರೀ ಅನುದಾನ ನೀಡಲಾಗಿದೆ.

ಅದರಂತೆ ರಾಜ್ಯದ ಯಾವ್ಯಾವ ಮಠಗಳಿಗೆ ಅನುದಾನ ಘೋಷಣೆ ಮಾಡಿದೆ ಎಂಬುದನ್ನು ನೋಡುವುದಾದರೆ..ಭಗೀರಥ ಪೀಠ- ಮಧುರೆ (ಉಪ್ಪಾರ), ಮಾದಾರ ಚನ್ನಯ್ಯ ಗುರುಪೀಠ-ಚಿತ್ರದುರ್ಗ, ಶ್ರೀಸಿದ್ದರಾಮೇಶ್ವರ ಬೋವಿ ಗುರುಪೀಠ ಕಾಗಿನೆಲೆ, ಶ್ರೀವಾಲ್ಮೀಕಿ ಗುರುಪೀಠ, ಶ್ರೀ ಯಾದವ ಸಂಸ್ಥಾನ ಮಠ, ಚಿತ್ರದುರ್ಗ, ಶ್ರೀ ನಾರಾಯಣಗುರು ಸಂಸ್ಥಾನ ನಿಟ್ಟೂರು, ಶ್ರೀ ಮಡಿವಾಳ ಗುರುಪೀಠ, ಚಿತ್ರದುರ್ಗ, ಶ್ರೀದೇವಾಂಗ ಗುರುಪೀಠ, ಹಂಪಿ, ಹಡಪದ ಅಪ್ಪಣ್ಣ ಗುರುಪೀಠ, ತಂಗಡಗಿ, ಶ್ರೀ ಕಂಬಾರ ಗುರುಪೀಠ, ತೇಲಸಂಗ ಮಠಗಳಿಗೆ ಅನುದಾನ ಘೋಷಿಸಲಾಗಿದೆ.

ಇವಿಷ್ಟೇ ಅಲ್ಲದೇ ಶ್ರೀ ಛಲವಾದಿ ಪೀಠ, ಚನ್ನೇನಹಳ್ಳಿ, ಶ್ರೀ ವಿಜಯಸಂಗಮ ವಿದ್ಯಾಪೀಠ, ಹೊಸದುರ್ಗ, ಶ್ರೀ ಶಿವಶಕ್ತಿ ಪೀಠ, ಇರಕಲ್ ಮಸ್ಕಿ, ಹೇಮವೇಮ ಸಂದ್ಭೋದನ ಪೀಠ, ಎರಹೊಸಳ್ಳಿ, ರಾಜ್ಯ ಕುಂಬಾರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು, ಗಂಗಾಮರಸ್ಥ/ಮೊಗವೀರ/ ಬೆಸ್ತ/ ಕೋಳಿ ಸಮಾಜ, ಸವಿತಾ ಸಮಾಜ ಬೆಂಗಳೂರು- ಪೀಠಗಳಿಗೂ 25 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.

loader