ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ಮಂಡ್ಯದಲ್ಲಿ ರೈತರೊಂದಿಗೆ ಗದ್ದೆಗೆ ಇಳಿದು ಭತ್ತದ ನಾಟಿ ಮಾಡಲಿದ್ದಾರೆ.
ಬೆಂಗಳೂರು : ಮಳೆ ಅಭಾವದಿಂದ ಕಳೆದ ಮೂರು ವರ್ಷದಿಂದ ಮಂಡ್ಯದಲ್ಲಿ ಭತ್ತ ನಾಟಿ ಮಾಡಿರಲಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೂರು ವರ್ಷಗಳ ಬಳಿಕ ಭತ್ತ ನಾಟಿ ಮಾಡುತ್ತಿದ್ದು, ಅವರೊಂದಿಗೆ ನಾನೂ ಸಂತಸ ಹಂಚಿಕೊಳ್ಳಲು ಶನಿವಾರ ಮಂಡ್ಯದಲ್ಲಿ ಭತ್ತ ನಾಟಿ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
3 ವರ್ಷದಿಂದ ತೊಗರಿ ಮತ್ತಿತರ ಬೆಳೆಗಳನ್ನು ಹಾಕುತ್ತಿದ್ದರು. ಇದೀಗ ವಿರಾಮದ ಬಳಿಕ ಭತ್ತ ನಾಟಿ ಮಾಡುವ ಅವಕಾಶ ಸಿಕ್ಕಿದೆ. ಹೀಗಾಗಿ ಕೆಲ ಕಾಲ ಅವರೊಂದಿಗೆ ಕಳೆಯುತ್ತೇನೆ ಎಂದರು.
