ಆಪದ್ಬಾಂಧವ ಪೊಲೀಸ್ ಆ್ಯಪ್ ಬಿಡುಗಡೆ

First Published 23, Jun 2018, 12:07 PM IST
CM Kumaraswamy Release KSP App
Highlights

ಪೊಲೀಸ್ ಸೇವೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ರಾಜ್ಯ ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿರುವ ಕೆಎಸ್‌ಪಿ ಆ್ಯಪ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದಾರೆ. 

ಬೆಂಗಳೂರು: ಪೊಲೀಸ್ ಸೇವೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ರಾಜ್ಯ ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿರುವ ಕೆಎಸ್‌ಪಿ ಆ್ಯಪ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್‌ನಲ್ಲಿ ಪೊಲೀಸ್ ಠಾಣೆಗಳು, ಆ ಠಾಣೆಗೆ ಸಂಬಂಧಪಟ್ಟ ಅಧಿಕಾರಿಗಳ ದೂರ ವಾಣಿ ಹಾಗೂ ಇ-ಮೇಲ್ ಸೇರಿ ಸಂಪೂರ್ಣ ವಿವರ ಲಭ್ಯವಿದೆ. 

ಅಲ್ಲದೆ ತಮ್ಮ ಸಮೀಪದ ಠಾಣೆಗೆ ಜನರು ಹೇಗೆ ಹೋಗಬೇಕು, ಎಷ್ಟು ದೂರವಾಗುತ್ತದೆ ಎಂಬ ಮಾಹಿತಿ ಸಹ ಇರುತ್ತದೆ. ಜನರು ಅಪಾಯಕ್ಕೆ ಸಿಲುಕಿದರೆ ಎಸ್‌ಓಎಸ್ ಎಂಬ ಬಟನ್ ಒತ್ತಿದರೆ ತಕ್ಷಣವೇ ಪೊಲೀಸರು ರಕ್ಷಣೆಗೆ ಧಾವಿಸಲಿದ್ದಾರೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೆಎಸ್‌ಪಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

loader