ಐವತ್ತು ವರ್ಷಗಳ ಹಿಂದೆ ತಮ್ಮ ಊರಿನಲ್ಲಿ ನಾಟಕವಾಡಿದ ಮಹಿಳೆಯೊಬ್ಬರನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಂತರ ಮಹಿಳೆಯೇ ವೇದಿಕೆ ಹತ್ತಿ ಬಂದ ಕೂಡಲೇ ಶಾಲು, ಹಾರ ಹಾಕಿ ಸನ್ಮಾನಿಸಿ ರೂ.500 ನೀಡಿದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.
ಮೈಸೂರು: ಐವತ್ತು ವರ್ಷಗಳ ಹಿಂದೆತಮ್ಮ ಊರಿನಲ್ಲಿ ನಾಟಕವಾಡಿದ ಮಹಿಳೆಯೊಬ್ಬರನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಂತರಮಹಿಳೆಯೇ ವೇದಿಕೆ ಹತ್ತಿ ಬಂದ ಕೂಡಲೇ ಶಾಲು, ಹಾರ ಹಾಕಿ ಸನ್ಮಾನಿಸಿ ರೂ.500 ನೀಡಿದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.
ಏಕಲವ್ಯ ನಗರದಲ್ಲಿ ಅಲೆಮಾರಿ ಕುಟುಂಬದವರಿಗೆ ನರ್ಮ್ ಯೋಜನೆಯಡಿ ನಿರ್ಮಿಸಲಾದ ಮಹಡಿ ಮನೆಗಳ ಹಕ್ಕು ಪತ್ರ ನೀಡಿದ ಸಿದ್ದರಾಮಯ್ಯಅವರು, ನಂತರಅಲೆಮಾರಿ ಜನಾಂಗವಾದ ದೊಂಬಿದಾಸರ ಕುರಿತು ಮಾತನಾಡಿದರು.
‘ನಮ್ಮ ಊರಿನಲ್ಲಿ ದೊಂಬಿದಾಸರು ಬಂದು ನಾಟಕವಾಡುತ್ತಿದ್ದರು. ಸತ್ಯವಾಹನ, ಸತ್ಯ ಸಾವಿತ್ರಿ ಎಂಬ ಬೀದಿ ನಾಟಕವನ್ನು ಮುನಿಯಮ್ಮ ಎಂಬವರು ತುಂಬಾ ಅದ್ಭುತವಾಗಿ ನಟಿಸಿದ್ದರು. ಅದೂ ನನಗೆ ಇನ್ನೂ ನೆನಪಿದೆ’ ಎಂದು ಹೇಳಿ ಸಿಎಂ ಮಾತು ಮುಂದುವರೆಸಿದ್ದರು. ಆದೇ ವೇಳೆ ಸಿಎಂ ಪ್ರಸ್ತಾಪಿಸಿದ ಮುನಿಯಮ್ಮ ಅವರೇ ವೇದಿಕೆಗೆ ಬಂದಾಗ ವೃದ್ಧೆಯನ್ನು ಅಚ್ಚರಿಯಿಂದ ನೊಡಿದಸಿದ್ದರಾಮಯ್ಯಅವರು,‘ನನ್ನ ನೆನಪಿದೆಯಾ? ನಾನು ಯಾರು? ಈಗಲೂ ನಾಟಕವಾಡ್ತಿಯಾ?’ ಎಂದು ಅವರನ್ನು ಆತ್ಮೀಯವಾಗಿ ಪ್ರಶ್ನಿಸಿದರು.
ಬಳಿಕ ಶಾಲು, ಹಾರ ಹಾಕಿ ಸನ್ಮಾನಿಸಿದ ಸಿಎಂ ತಮ್ಮ ಜೇಬಿನಿಂದ ರೂ. 500 ಕೊಟ್ಟರು. ವೇದಿಕೆಯಲ್ಲಿದ್ದ ಲೋಕೋಪಯೋಗಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಕೂಡಾ ಮುನಿಯಮ್ಮ ಅವರಿಗೆ ರೂ.1000 ಕೊಟ್ಟರು.
